Untitled Document
Sign Up | Login    
Dynamic website and Portals
  
June 5, 2015

ಬಿಜೆಪಿ ಸದಸ್ಯತ್ವ ಅಭಿಯಾನ: 30 ಲಕ್ಷ ಮುಸ್ಲಿಮರು ಬಿಜೆಪಿಗೆ ಸೇರ್ಪಡೆ

ಲಖ್ನೌ : ಬಿಜೆಪಿ ಇತ್ತೀಚೆಗೆ ನಡೆಸಿದ ಸದಸ್ಯತ್ವ ಅಭಿಯಾನದ ಫ‌ಲವಾಗಿ 30 ಲಕ್ಷ ಮುಸ್ಲಿಮರು ಪಕ್ಷದ ಸದಸ್ಯರಾಗಿದ್ದಾರೆ.

ಮಿಸ್‌ ಕಾಲ್‌ ಅಭಿಯಾನದಲ್ಲಿ ಮುಸ್ಲಿಮರು ಬಿಜೆಪಿಗೆ ಸೇರಿದ್ದರೂ, ಮುಸ್ಲಿಂ ಸಮುದಾಯದಿಂದ ಅಭಿಯಾನಕ್ಕೆ ಇಷ್ಟು ಪ್ರತಿಕ್ರಿಯೆ ವ್ಯಕ್ತವಾಗಬಹುದು ಎಂದು ಸ್ವತಃ ಬಿಜೆಪಿ ನಾಯಕರೇ ಎಣಿಸಿರಲಿಲ್ಲ ಎನ್ನಲಾಗಿದೆ.

ಮಿಸ್‌ ಕಾಲ್‌ ಮೂಲಕ ಸದಸ್ಯರಾದವರನ್ನು ಪಕ್ಷದ ಪೂರ್ಣಾವಧಿ ಕಾರ್ಯಕರ್ತರನ್ನಾಗಿ ಮಾಡುವ ಸವಾಲು ಈಗ ಪಕ್ಷದ ಮುಂದಿದೆ. ಪಕ್ಷ ಮತ್ತು ಮುಸ್ಲಿಮರ ನಡುವೆ ಇರುವ ಅಂತರವನ್ನು ನಿವಾರಿಸಲು ನಾಯಕರು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪಕ್ಷದ ಕುರಿತು ಮುಸ್ಲಿಮ್‌ ಸಮುದಾಯಕ್ಕಿರುವ ತಪ್ಪುಗ್ರಹಿಕೆ ಕಡಿಮೆಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

’ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಘೋಷಣೆಗೆ ಪೂರಕವಾಗಿ ಪಕ್ಷ ಮುನ್ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಮುಸ್ಲಿಮರು ಬಿಜೆಪಿ ಸದಸ್ಯರಾಗಿ ಸೆರ್ಪಡೆಯಾಗಲಿದ್ದಾರೆ' ಎಂದು ಪಕ್ಷದ ಅಲ್ಪಸಂಖ್ಯಾತ ಸೆಲ್‌ ನ ಅಧ್ಯಕ್ಷ ಅಬ್ದುಲ್‌ ರಶೀದ್‌ ಅನ್ಸಾರಿ ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited