Untitled Document
Sign Up | Login    
Dynamic website and Portals
  
March 18, 2015

ಬಿಜೆಪಿ ಸದಸ್ಯತ್ವ ಪಡೆಯದ ಶಾಲಾ ಶಿಕ್ಷಕರಿಗೆ ಸಂಬಳ ಇಲ್ಲ

ನವದೆಹಲಿ : ರಾಷ್ಟ್ರೀಯ ಶಾಲೆಗಳಲ್ಲಿ ಒಂದಾಗಿರುವದೆಹಲಿಯ ರಾನ್‌ ಇಂಟರ್ ನ್ಯಾಶನಲ್‌ ಸ್ಕೂಲ್‌, ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಅಧಿಕೃತವಾಗಿಯೇ ಕೈಗೊಂಡಿದೆ. ಈ ಹಿನ್ನಲೆಯಲ್ಲಿ ತನ್ನ ಶಿಕ್ಷಕ ಸಿಬಂದಿಗಳಿಗೆ, ವಿದ್ಯಾರ್ಥಿಗಳಿಗೆ ಬಿಜೆಪಿ ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಕೇಳಿಕೊಂಡಿದೆ.

ಇದೇನೂ ಒತ್ತಾಯದ ಸದಸ್ಯತ್ವ ಅಭಿಯಾನವಲ್ಲ; ಯಾರೂ ಕೂಡ ಸ್ವ ಇಚ್ಛೆಯಿಂದ ಬಿಜೆಪಿಯನ್ನು ಸೇರಬಹುದು ಎಂದು ಶಾಲೆಯ ಆಡಳಿತ ಹೇಳುತ್ತಿದೆ. ಆದರೆ ಬಿಜೆಪಿ ಸೇರುವುದನ್ನು ಇನ್ನೂ ನಿರ್ಧರಿಸದ ಕೆಲವು ಶಿಕ್ಷಕರು ಹಾಗೂ ಸಿಬಂದಿಗಳು, ತಮ್ಮ ತಿಂಗಳ ಸಂಬಳವನ್ನು ತಡೆ ಹಿಡಿಯಲಾಗಿದೆ ಎಂಬ ಅಳಲನ್ನು ತೋಡಿಕೊಂಡಿದ್ದಾರೆ.

ಶಾಲೆಯ ಆಡಳಿತ ನಿರ್ದೇಶಕಿ ಗ್ರೇಸ್‌ ಪಿಂಟೋ ಅವರು ಶಾಲೆಯಲ್ಲಿ ನಡೆಯುತ್ತಿರುವ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ದೃಢೀಕರಿಸಿದ್ದಾರೆ. ಆದರೆ ಇದು ಸಂಪೂರ್ಣವಾಗಿ ಸ್ವಯಂ ಪ್ರೇರಣೆಯ ಅಭಿಯಾನವೇ ವಿನಾ ಇದರಲ್ಲಿ ಒತ್ತಾಯ, ಒತ್ತಡಗಳು ಇಲ್ಲ ಎಂದು ಹೇಳಿದ್ದಾರೆ.

ಆದರೆ ಶಾಲಾ ಸಿಬಂದಿಗಳು ಮಾತ್ರ ಬಿಜೆಪಿ ಸೇರುವುದಕ್ಕೆ ತಮ್ಮ ಮೇಲೆ ಶಾಲೆಯ ಆಡಳಿತ ಮಂಡಳಿಯು ಒತ್ತಾಯ, ಒತ್ತಡ ಹೇರುತ್ತಿದೆ ಎಂದು ಹೇಳುತ್ತಿದ್ದಾರೆ.

ದೆಹಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕಮಲ್‌ ಜಿತ್‌ ಶೇರಾವತ್‌ ಅವರು ಹೇಳುವಂತೆ ರಾನ್‌ ಇಂಟರ್‌ನ್ಯಾಶನಲ್‌ ಸ್ಕೂಲ್‌ನ ಆಡಳಿತ ನಿರ್ದೇಶಕಿ ಗ್ರೇಸ್‌ ಪಿಂಟೋ ಅವರು ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದು ಅವರು ತಮ್ಮ ಶಾಲೆಯಲ್ಲಿ ಖಾಸಗಿ ನೆಲೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕೈಗೊಂಡಿದ್ದಾರೆ.

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿ ತಮಗೆ ವಾಟ್ಸಪ್‌ ಸಂದೇಶಗಳು ಬಂದಿವೆ; ಬಿಜೆಪಿ ಸದಸ್ಯತ್ವ ಪಡೆಯುವುದಕ್ಕಾಗಿ ಟೋಲ್‌ ಫ್ರೀ ನಂಬರ್ 18002662020 ನೀಡಲಾಗಿದೆ. ಈ ನಂಬರ್‌ಗೆ ಉತ್ತರಿಸಿದರೆ ಒಡನೆಯೇ ನಮಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸಿಕ್ಕಿರುವ ಹಾಗೂ ಅದರ ನೋಂದಣಿ ಸಂಖ್ಯೆಯ ಸಂದೇಶ ಬರುತ್ತದೆ. ಈ ನೋಂದಣಿ ಸಂಖ್ಯೆಯನ್ನು ನಾವು ರಾನ್‌ ಶಾಲೆಯ ಆಡಳಿತ ಮಂಡಳಿಗೆ ತಿಳಿಸಬೇಕಾಗಿದೆ ಎಂದು ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಹೆತ್ತವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ರಾನ್‌ ಶಾಲೆಯ ಓರ್ವ ಸಿಬಂದಿ ರೋಹಿಣಿ ಸ್ಕೂಲ್‌ನಲ್ಲಿ ಹೀಗೆ ಹೇಳಿದ್ದಾರೆ: ಶಾಲೆಯ ಗಾರ್ಡನರ್‌ ನಿಂದ ಹಿಡಿದು ಹಿರಿಯ ಶಿಕ್ಷಕರ ವರೆಗಿನ ರಾನ್‌ ಶಾಲೆಯ ಎಲ್ಲ ಸಿಬಂದಿಗಳು ತಾವು ಖುದ್ದು ಬಿಜೆಪಿ ಸದಸ್ಯತ್ವ ಪಡೆಯುವುದಲ್ಲದೆ ಇನ್ನೂ ಹತ್ತು ಸದಸ್ಯರನ್ನು ಮಾಡಿಕೊಬೇಕೆಂದು ಸೂಚಿಸಲಾಗಿದೆ. ಇದಕ್ಕಾಗಿ ಬಿಜೆಪಿ ಸದಸ್ಯತ್ವದ ಅರ್ಜಿಗಳನ್ನು ವಿತರಿಸಲಾಗಿದೆ ಮತ್ತು ಬಿಜೆಪಿಯ ಟೋಲ್‌ ಫ್ರೀ ನಂಬರ್ ಗಳನ್ನು ವಾಟ್ಸಪ್‌ ಮೂಲಕ ಅವರಿಗೆ ರವಾನಿಸಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited