BW News Bureau : ಪುರಭವನ ಹಾಗೂ ಕಾರ್ಪೋರೇಷನ್ ವೃತ್ತದಲ್ಲಿ ಸಂಚಾರದಟ್ಟಣೆ ತಪ್ಪಿಸಿ ವಿಧಾನಸೌಧ ಮತ್ತು ಸುತ್ತಮುತ್ತಲಿನ ಸರ್ಕಾರಿ ಕಛೇರಿಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ ಮತ್ತು ಸಿಬಂದಿಗಳಿಗೆ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲು ಬಿಎಂಟಿಸಿ ಮತ್ತು ಸಂಚಾರಿ ಪೊಲೀಸರು ಅವೆನ್ಯೂ ರಸ್ತೆಯಲ್ಲಿ ಬಿಎಂಟಿಸಿ ಮಿನಿ ಬಸ್ ಸಂಚರಿಸಲು ನಿರ್ಧಾರ ಕೈಗೊಂಡಿದ್ದಾರೆ.
ಮೇ 28ರಿಂದ 15 ದಿನಗಳ ಕಾಲ ಬೆಳಿಗ್ಗೆ 8.30ರಿಂದ 10 ಗಂಟೆವರೆಗೆ ಪ್ರಾಯೋಗಿಕವಾಗಿ ಬಿಎಂಟಿಸಿ ಬಸ್ ಸಂಚರಿಸಲಿದೆ.
ಎನ್.ಆರ್.ಕಾಲನಿ, ತ್ಯಾಗರಾಜನಗರ,ಎಜಿಎಸ್ ಲೇಔಟ್ ಮತ್ತು ವಿದ್ಯಾಪೀಠ ಸರ್ಕಲ್ ನಿಂದ ವಿಧಾನಸೌಧದವರೆಗೆ ಬಸ್ ಸೇವೆ ಕಲ್ಪಿಸಲಾಗಿದೆ.
ಇನ್ನು ಸಿಟಿ ಮಾರ್ಕೆಟ್, ಕಾರ್ಪೋರೇಷನ್, ಕಾವೇರಿ ಭವನ ಮಾರ್ಗವಾಗಿ ವಿಧಾನಸೌಧ ಕಡೆಗೆ ಸಂಚರಿಸುವ ಬಸ್ ಗಳ ಮಾರ್ಗ್ ಬದಲಾವಣೆ ಮಾಡಲಾಗಿದೆ. ಸಿಟಿ ಮಾರ್ಕೆಟ್ ನಿಂದ್ ಅವೆನ್ಯೂ ರಸ್ತೆ ಮೂಲಕ ಮೈಸೂರು ಬ್ಯಾಂಕ್ ಮಾರ್ಗವಾಗಿ ಅರಮನೆ ರಸ್ತೆಯಲ್ಲಿ ಸಾಗಿ ಸಿಐಡಿ ಪ್ರಧಾನ ಕಛೇರಿ ಸಿಗ್ನಲ್ ನಲ್ಲಿ ಬಲ ತಿರುವು ಪಡೆದು ವಿಧಾನಸೌಧ ತಲುಪಲು ಅವಕಾಶ ಕಲ್ಪಿಸಲಾಗಿದೆ.
ಅವೆನ್ಯೂ ರಸ್ತೆಯಲ್ಲಿ ಬಿಎಂಟಿಸಿ ಬಸ್ ಸಂಚಾರ ಯಶಸ್ವಿಯಾದರೆ ಪಾದಚಾರಿ ಮಾರ್ಗದಲ್ಲಿ ಬ್ಯಾರಿಕೇಡ್ ಅಳವಡಿಸಲು ನಿರ್ಧರಿಸಲಾಗಿದೆ.ಈಗಾಗಲೇ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಮಿನಿ ಬಸ್ ಸಂಚಾರ ಆರಭವಾಗಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.