ಬೆಂಗಳೂರು : ಜೈವಿಕ ಡೀಸೆಲ್ ಮಾತ್ರ ಉಪಯೋಗಿಸಿ ಚಲಿಸುವ ಬಸ್ ಅನ್ನು ಉಪಯೋಗಿಸಿದ ಮೊದಲ ರಾಜ್ಯ ಕರ್ನಾಟಕ. ಪ್ರಯೋಗಿಕ ಸಂಚಾರಕ್ಕಾಗಿ ಸ್ಕಾನಿಯಾ ತನ್ನ ಜೈವಿಕ ಡೀಸೆಲ್ ಬಸ್ ಅನ್ನು ಕರ್ನಾಟಕ ಸಾರಿಗೆ ಸಂಸ್ಥೆಗೆ ನೀಡಿದೆ.
ಇದಲ್ಲದೇ, ಕೆ ಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿ, ಜೆಬಿಎಂ, ಉತ್ತರ ಭಾರತದ ಪ್ರಮುಖ ವಾಹನ ಬಿಡಿಭಾಗಗಳ ತಯಾರಕರ ಜೊತೆ ಲೋ ಫ್ಲೋರ್ ಬಸ್ ಮತ್ತು ವಿದ್ಯುತ್ ಬಸ್ ಖರೀದಿಯ ಬಗ್ಗೆ ಕೂಡ ಮಾತುಕತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಆಧುನಿಕ ತಂತ್ರಜ್ನಾನದ ಬಸ್ ಗಳಿಗೆ ಕರ್ನಾಟಕದಲ್ಲಿ ಬೇಡಿಕೆ ಇರುವುದರಿಂದ ಕಂಪನಿ ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಮಾಡಲು ಬಯಸುತ್ತದೆ ಎಂದು ಜೆಬಿಎಂ ನ ನಿಶಾಂತ್ ಆರ್ಯಾ ತಿಳಿಸಿದ್ದಾರೆ.