Untitled Document
Sign Up | Login    
Dynamic website and Portals
  
May 19, 2015

ಕೇಜ್ರಿವಾಲ್ ಓರ್ವ ನಕ್ಸಲೈಟ್: ಸುಬ್ರಮಣಿಯನ್ ಸ್ವಾಮಿ

ಸುಬ್ರಮಣಿಯನ್ ಸ್ವಾಮಿ ಸುಬ್ರಮಣಿಯನ್ ಸ್ವಾಮಿ

ನವದೆಹಲಿ : ಶಕುಂತಲಾ ಗಾಮ್ಲಿನ್ ಅವರನ್ನು ದೆಹಲಿ ಮುಖ್ಯಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವ ವಿಚಾರದಲ್ಲಿ ತಗಾದೆ ತೆಗೆದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಕೇಜ್ರಿವಾಲ್ ಮೂತಃ ಓರ್ವ ನಕ್ಸಲೈಟಾಗಿದ್ದು ಅವರಿಗೆ ಆಡಳಿತ ನಡೆಸುವುದರಲ್ಲಿ ಆಸಕ್ತಿ ಇಲ್ಲವೆಂದು ಸುಬ್ರಮಣಿಯನ್ ಸ್ವಾಮಿ ಲೇವಡಿ ಮಾಡಿದ್ದಾರೆ.

ಮುಖ್ಯಕಾರ್ಯದರ್ಶಿ ನೇಮಕದಲ್ಲಿ ಅನಾವಶ್ಯಕವಾಗಿ ವಿವಾದ ಉಂಟುಮಾಡುತ್ತಿರುವ ಅರವಿಂದ್ ಕೇಜ್ರಿವಾಲ್, ಓರ್ವ ನಕ್ಸಲೈಟ್ ಎಂದಿದ್ದು, ಚುನಾವಣೆಗೂ ಮುನ್ನ ದೆಹಲಿ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಕೇಜ್ರಿವಾಲ್ ಗೆ ಆಸಕ್ತಿ ಇಲ್ಲ ಎಂದು ಆರೋಪಿಸಿದ್ದಾರೆ.

ಭರವಸೆ ಈಡೇರಿಸಲು ಸಾಧ್ಯವಾಗದ ಕಾರಣ ಕೇಜ್ರಿವಾಲ್ ಅನವಶ್ಯಕ ವಿವಾದಗಳನ್ನು ಸೃಷ್ಟಿಸಿ, ಜನತೆಯ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ.

ಉಚಿತ ವೈಫೈ ನೀಡುವ ಸಣ್ಣ ಭರವಸೆಯನ್ನೂ ಕೇರ್ಜಿವಾಲ್ ರಿಂದ ಈಡೇರಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಕೇಳಿಬರುವ ಆರೋಪಗಳಿಂದ ಕಳಚಿಕೊಳ್ಳಲು ಕೇಜ್ರಿವಾಲ್ ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited