ನವದೆಹಲಿ : 'ಕಾಂಗ್ರೆಸ್' ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್ ಖಾತೆ ತೆರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ಭಾರತದಲ್ಲಿ ರಾಜಕಾರಣಿಗಳೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗುವ ಟ್ರೆಂಡ್ ಉದ್ಭವಿಸಿದೆ.
ಪ್ರಸ್ತುತ ರಾಹುಲ್ ಗಾಂಧಿ ಟ್ವಿಟರ್ ಖಾತೆ (@OfficeofRG.)ಗೆ 11.1 ಸಾವಿರ ಹಿಂಬಾಲಕರಿದ್ದಾರೆ. ರಾಹುಲ್ ಗಾಂಧಿ ಫೋಟೊಗಳನ್ನು ಮಾತ್ರ ಅಪ್ ಲೋಡ್ ಮಾಡಲಾಗಿದ್ದು, ಇದರಲ್ಲಿ ಕಾಂಗ್ರೆಸ್ ನ ಮತ್ತೊಂದು ವಿಭಾಗವಾದ ಎನ್.ಎಸ್.ಯು.ಐ ಕುರಿತಾದ ಅಪ್ ಡೇಟ್ ಗಳೂ ದೊರೆಯಲಿವೆ.
ಕಳೆದ ಒಂದು ವರ್ಷದಿಂದ ಬಿಜೆಪಿ ನಾಯಕರು ಟ್ವಿಟರ್ ಹಾಗೂ ಫೇಸ್ ಬುಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರೆ, ರಾಹುಲ್ ಗಾಂಧಿ ಈಗ ಸಾಮಾಜಿಕ ಜಾಲತಾಣ ಪ್ರವೇಶಿಸುವ ಮೂಲಕ ತಮ್ಮ ರಾಜಕೀಯ ವರ್ಚಸ್ಸನ್ನು ವೃದ್ಧಿಗೊಳಿಸಲು ಯತ್ನಿಸುತ್ತಿದ್ದಾರೆ. ವಿದೇಶ ಪ್ರವಾಸದಿಂದ ಭಾರತಕ್ಕೆ ವಾಪಸ್ಸಾದ ಬಳಿಕ ರಾಹುಲ್ ಗಾಂಧಿ ಚಟುವಟಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು ಎಂದಿಗಿಂತಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.