ಟ್ರೈಫೋಲಿ : ಎರಡು ತಿಂಗಳ ಹಿಂದೆ ಲಿಬಿಯಾ ಬೀಚ್ ನಲ್ಲಿ 21 ಈಜಿಪ್ಟ್ ಕ್ರಿಶ್ಚಿಯನ್ ರನ್ನು ಐಸಿಸ್ ಉಗ್ರರು ಶಿರಚ್ಛೇದ ಮಾಡಿದ್ದರು. ಈ ಬಾರಿ ಮತ್ತೆ ಇಥಿಯೋಪಿಯಾದ ಹಲವು ಕ್ರೈಸ್ತರನ್ನು ಲಿಬಿಯಾದಲ್ಲಿ ಶಿರಚ್ಛೇದ ಮಾಡಿದ ವಿಡಿಯೋವನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಬಿಡುಗಡೆ ಮಾಡಿದ್ದಾರೆ.
ಐಸಿಸ್ ಬಿಡುಗಡೆ ಮಾಡಿರುವ ಹೊಸ ವಿಡಿಯೋ 30 ನಿಮಿಷಗಳದ್ದಾಗಿದೆ. ಒಂದು ಗುಂಪು 12 ಜನರನ್ನು ಬೀಚ್ ನಲ್ಲಿ ಕರೆದುಕೊಂಡು ಹೋಗುವ ದೃಶ್ಯ ಕಾಣಿಸಿದರೆ, ಇನ್ನೊಂದು ವಿಡಿಯೊದಲ್ಲಿ 16 ಜನರನ್ನು ಮರಳಿನಲ್ಲಿ ನಿಲ್ಲಿಸಿಕೊಂಡಿರುವ ದೃಶ್ಯ ಇದೆ.
ಅಲ್ಲದೇ ಕ್ರಿಶ್ಚಿಯನ್ ರು ಇಸ್ಲಾಮ್ ಗೆ ಕಡ್ಡಾಯವಾಗಿ ಮತಾಂತರವಾಗಬೇಕು, ಇಲ್ಲವೇ ಸಾಯಲು ತಯಾರಾಗಿ ಎಂಬ ಬೆದರಿಕೆ ವೀಡಿಯೊದಲ್ಲಿದೆ. ಈಗಾಗಲೇ ನಾವು ಸಾಕಷ್ಟು ಬಾರಿ ಕ್ರಿಶ್ಚಿಯನ್ ಸಮುದಾಯಕ್ಕೆ ಆಫರ್ ಕೊಟ್ಟಿದ್ದೇವೆ. ಅದೇ ರೀತಿ ಡೆಡ್ ಲೈನ್ ಕೂಡಾ ನೀಡಿದ್ದೇವು. ಆದರೆ ಕ್ರಿಶ್ಚಿಯನ್ ರು ಯಾವತ್ತೂ ನಮಗೆ ಸಹಕಾರ ನೀಡಿಲ್ಲ ಎಂದು ಐಸಿಸ್ ಉಗ್ರನೊಬ್ಬ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.