Untitled Document
Sign Up | Login    
Dynamic website and Portals
  
March 25, 2015

ಮಕ್ಕಳಿಗೆ ಐಸಿಸ್ ಉಗ್ರರಿಂದ ಯುದ್ಧ, ಶಿರಚ್ಛೇದ ತರಬೇತಿ

ಸಿರಿಯಾ : ಸುಮಾರು 400ಕ್ಕೂ ಹೆಚ್ಚು ಸಂಖ್ಯೆಯ ಮಕ್ಕಳಿಗೆ ಸಿರಿಯಾದಲ್ಲಿ ಐಸಿಸ್ ಖಲೀಫೇಟ್ ಸಂಘಟನೆ ಯುದ್ಧ ವಿದ್ಯೆಯ ತರಬೇತಿ ನೀಡಿದೆ ಎಂದು ಸಿರಿಯಾದ ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ.

ಯುದ್ಧ ತರಬೇತಿ ಪಡೆದಿರುವ ಈ ಮಕ್ಕಳನ್ನು ಕಬ್ಸ್ ಆಫ್ ಖಲೀಫೇಟ್ (ಖಲೀಫೇಟ್‌ ನ ಕಂದಮ್ಮಗಳು) ಎಂದು ಕರೆಯಲಾಗುತ್ತಿದೆ. ಸಿರಿಯಾದ ತನ್ನ ನಿಯಂತ್ರಣವಿರುವ ಪ್ರದೇಶಗಳಲ್ಲಿ ಜಿಹಾದಿಗಳ ತಂಡಗಳು ಈ ಮಕ್ಕಳಿಗೆಲ್ಲ ಮಿಲಿಟರಿ ಹಾಗೂ ಧಾರ್ಮಿಕ ತರಬೇತಿಗಳನ್ನು ನೀಡುತ್ತಿದೆ ಎಂದು ಬ್ರಿಟನ್ ಮೂಲದ ಸಿರಿಯಾ ಮಾನವ ಹಕ್ಕುಗಳ ಸಂಘಟನೆ ವರದಿ ಮಾಡಿದೆ.

ಕೇವಲ 2015ರಲ್ಲೇ ಇಷ್ಟು ಮಕ್ಕಳಿಗೆ ತರಬೇತಿ ನೀಡಿದ್ದು, ಈ ಮಕ್ಕಳಲ್ಲಿ ಹಲವರು 8 ವರ್ಷದ ಒಳಗಿನವರು. ಮಿಲಿಟರಿ ತರಬೇತಿ ಅಂಗವಾಗಿ ಬಂದೂಕುಗಳಿಗೆ ಗುಂಡುಗಳನ್ನು ತುಂಬುವುದು, ಫೈರ್ ಮಾಡುವುದು, ಕುರುಚಲು ಪೊದೆಯ ಮರಳು ಗಾಡಿನಲ್ಲಿ ತೆವಳಿಕೊಂಡು ಹೋಗುವುದು ಮುಂತಾದವುಗಳನ್ನು ಈ ಮಕ್ಕಳಿಗೆ ಕಲಿಸಿಕೊಡಲಾಗುತ್ತಿದೆ.

ಈ ಹಿಂದಿನ ವರ್ಷಗಳಲ್ಲೂ ಸಾವಿರಾರು ಮಕ್ಕಳಿಗೆ ಈಗಾಗಲೇ ಇಂತಹ ತರಬೇತಿ ನೀಡಲಾಗಿದೆ. ಐಸಿಸ್ ನ ಅಂಗಸಂಸ್ಥೆಯೊಂದು ಈ ಎಲ್ಲ ವಿಡಿಯೊ ದೃಶ್ಯಾವಳಿ ಬಿಡುಗಡೆ ಮಾಡಿದೆ. ಈ ಮಕ್ಕಳನ್ನು ಬಲವಂತವಾಗಿ ಯುದ್ಧ ಮಾಡಲು ಕಳುಹಿಸುವುದಿಲ್ಲವಾದರೂ ಮಿಲಿಟರಿ ತರಬೇತಿ ಪಡೆಯದ ಯಾವ ಶಾಲೆಗಳೂ ಇರಬಾರದು ಎಂಬುದು ಐಎಸ್ ಉದ್ದೇಶ. ಮಕ್ಕಳಿಗೆ ಶೂಟ್ ಮಾಡುವುದು, ಕಾರ್ ಓಡಿಸುವುದು ಕಲಿಸಲಾಗುತ್ತಿದೆ. ಮಕ್ಕಳನ್ನು ಒಲಿಸಿಕೊಳ್ಳಲು ಅವರಿಗೆ ಹಣ ನೀಡಲಾಗುತ್ತದೆ. ಈ ಮಕ್ಕಳನ್ನು ತನಿಖಾ ಠಾಣೆಗಳಲ್ಲಿ ಸಂಚಾರ ಗಮನಿಸಲು, ಗುಪ್ತ ಮಾಹಿತಿ ಸಂಗ್ರಹಿಸಲು ಬಳಸಿಕೊಳ್ಳಲಾಗುತ್ತದೆ. ಈ ಮಕ್ಕಳಲ್ಲಿ ಕನಿಷ್ಠ 10 ಮಕ್ಕಳನ್ನು ಆತ್ಮಾಹುತಿ ಬಾಂಬರ್‌ ಗಳಾಗಿ ಸಿದ್ಧಗೊಳಿಸಲಾಗಿದೆ. ಖೈದಿಗಳ ಶಿರಚ್ಛೇದಕ್ಕೂ ಇವರನ್ನು ಬಳಸಿಕೊಳ್ಳಲಾಗುತ್ತದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited