Untitled Document
Sign Up | Login    
Dynamic website and Portals
  
April 2, 2015

ರಷ್ಯಾದಲ್ಲಿ ದೋಣಿ ದುರಂತ: 70 ಕ್ಕೂ ಹೆಚ್ಚು ಮಂದಿ ಸಾವು

ಮಾಸ್ಕೋ : ರಷ್ಯಾದ ಪೂರ್ವ ಸಮುದ್ರದಲ್ಲಿ ಕಳೆದ ರಾತ್ರಿ ಸಂಭವಿಸಿದ ದೋಣಿ ದುರಂತದಲ್ಲಿ ಕನಿಷ್ಠ 70 ಮಂದಿ ಮೃತಪಟ್ಟಿದ್ದಾರೆ. ಈ ಬೋಟ್‌ನಲ್ಲಿ 132 ಜನರಿದ್ದರು. ಈಗಾಗಲೇ 59 ಮೃತದೇಹ ಪತ್ತೆಯಾಗಿದ್ದು, ಉಳಿದ ಮೃತದೇಹಗಳಿಗಾಗಿ ಶೋಧಕಾರ್ಯ ನಡೆದಿದೆ. ಉಳಿದ 62 ಪ್ರಯಾಣಿಕರು ಪಾರಾಗಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.

ಬದುಕುಳಿದವರೆಲ್ಲ ಬೋಟ್‌ ನ ಸಿಬ್ಬಂದಿ. ರಷ್ಯಾದ ಪೂರ್ವದಲ್ಲಿರುವ ಕಾಮ್‌ ಚಟ್ಕ ತೀರ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಮುಳುಗಿರುವ ದೋಣಿಯನ್ನು ದಲ್ನೀಯ್ ವೋಸ್ಟಕ್ ಎಂದು ಹೇಳಲಾಗಿದೆ.

ಈ ದೋಣಿಯಲ್ಲಿ 40 ಮಂದಿ ಮ್ಯಾನ್ಮಾರಿಗಳು, 78 ಜನ ರಷ್ಯನ್ನರು ಹಾಗೂ ಉಕ್ರೇನ್ ಲಿಥುವೇನಿಯಾ ಮತ್ತು ವನೂವಾಟು ಪ್ರಾಂತ್ಯಗಳಿಗೆ ಸೇರಿದ ಪ್ರಜೆಗಳಿದ್ದರು ಎಂದು ಕರಾವಳಿ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited