Untitled Document
Sign Up | Login    
Dynamic website and Portals
  
March 30, 2015

ಬಿಬಿಎಂಪಿ ವಿಭಜನೆ ನೆಪ ಬೇಡ, ಮೇ 30ರೊಳಗೆ ಚುನಾವಣೆ ನಡೆಸಿ: ಹೈಕೋರ್ಟ್

BW News Bureau : ಬಿಬಿಎಂಪಿ ವಿಭಜನೆ, ವಾರ್ಡ್ ಗಳ ಪುನರ್ ವಿಂಗಡಣೆ ನೆಪ ಹೇಳಿ ಬಿಬಿಎಂಪಿ ಚುನಾವಣೆ ಮುಂದೂಡುವಂತಿಲ್ಲ. ಮೇ 30ರೊಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಮಾರ್ಚ್ 19ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತ ಸುಧಾರಣೆ ದೃಷ್ಟಿಯಿಂದ ಬಿಬಿಎಂಪಿಯನ್ನು ಮೂರು ಭಾಗಗಳಾಗಿ ವಿಭಜನೆ ( ಬಿಬಿಎಂಪಿ ಮೂರು ಹೋಳು) ಮಾಡಲು ನಿರ್ಧರಿಸಿತ್ತು. ಅಲ್ಲದೇ ವಾರ್ಡ್ ಪುನರ್ ವಿಂಗಡಣೆ ಕಾರ್ಯದ ಹೊಣೆಗಾರಿಕೆ ಈಗಾಗಲೇ ರಚನೆಯಾಗಿರುವ ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿಗೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿತ್ತು.

ರಾಜ್ಯ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಕಾರ್ಪೋರೇಟರ್ ಗಳಾದ ಬಿ.ಸೋಮಶೇಖರ್, ರಾಮಮೂರ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಬಿಬಿಎಂಪಿ ವಿಭಜನೆ ತಕ್ಷಣಕ್ಕೆ ಸಾಧ್ಯವಿಲ್ಲ. ರಾಜ್ಯ ಸರ್ಕಾರದಿಂದ ಏಕಪಕ್ಷೀಯ ಕ್ರಮ ಸರಿಯಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದೆ.

ವಿಭಜನೆಯವರೆಗೆ ಬಿಬಿಎಂಪಿ ಖಾಲಿ ಇಡಲು ಸಾಧ್ಯವಿಲ್ಲ. ಮೇ 30ರೊಳಗೆ ಚುನಾವಣೆ ನಡೆಸಿ ಎಂದಿರುವ ಹೈಕೋರ್ಟ್, ಏ.13ರೊಳಗೆ ಮೀಸಲಾತಿ ಪಟ್ಟಿ ನೀಡುವಂತೆ ಸೂಚನೆ ನೀಡಿದೆ. ಇಲ್ಲದಿದ್ದರೆ ಹಾಲಿ ಮೀಸಲಾತಿ ಪಟ್ಟಿಯಂತೆಯೇ ಚುನಾವಣೆ ನಡೆಸಲು ಆದೇಶ ನೀಡಲಾಗುವುದು ಎಂದು ಹೇಳಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited