Untitled Document
Sign Up | Login    
Dynamic website and Portals
  
March 27, 2015

ಶ್ರೀಮಂತರು ಎಲ್.ಪಿ.ಜಿ ಸಬ್ಸಿಡಿ ತೆಗೆದುಕೊಳ್ಳದಂತೆ ಪ್ರಧಾನಿ ಮೋದಿ ಮನವಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ : ಉಳ್ಳವರು-ಉತ್ತಮ ಜೀವನ ನಡೆಸುತ್ತಿರುವವರು ಎಲ್.ಪಿ.ಜಿ ಸಬ್ಸಿಡಿ ತೆಗೆದುಕೊಳ್ಳುವುದನ್ನು ಕೈಬಿಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಇದು 2೦22ರ ವೇಳೆಗೆ ಇಂಧನ ಆಮದನ್ನು ಶೇಕಡಾ 1೦ ರಷ್ಟು ಕಡಿತಗೊಳಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಸದ್ಯದ 27 ಲಕ್ಷ ಜನರ ಮನೆಗಳಿಗೆ ಎಲ್.ಪಿ.ಜಿ ಪೈಪ್ ಸಂಪರ್ಕ ಕೊಟ್ಟಿದ್ದು ಇದನ್ನು ಮುಂದಿನ ನಾಲ್ಕು ವರ್ಷಗಳಲ್ಲಿ 1 ಕೋಟಿ ಮನೆಗಳಿಗೆ ಇದನ್ನು ವಿಸ್ತರಿಸುವ ಇಂಧನ ಸಂಸ್ಥೆಗಳ ಯೋಜನೆಯನ್ನು ಹಂಚಿಕೊಂಡ ಅವರು ಮುಂದಿನ ದಿನಗಳಲ್ಲಿ 2.8 ಲಕ್ಷ ಜನರು ಎಲ್.ಪಿ.ಜಿ ಸಬ್ಸಿಡಿ ಬೇಡ ಎಂದರೆ 1೦೦ ಕೋಟಿ ಉಳಿತಾಯವಾಗುತ್ತದೆ ಎಂದು ಹೇಳಿದ್ದಾರೆ.

ಸ್ವದೇಶದಲ್ಲೇ ಉತ್ಪತ್ತಿಯಾಗುವ ಇಂಧನಕ್ಕೆ ಸೀಮಿತವಾಗಿ ಆಮದಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಮ್ಮ ಗುರಿ ದೊಡ್ಡದಿರಬೇಕು, ಆಗಷ್ಟೇ ನಮ್ಮ ಆಮದಿನ ಪ್ರಮಾಣ ಕಡಿತಗೊಳಿಸಿಕೊಳ್ಳಬಹುದು. ಅದಕ್ಕಾಗಿ ನಾವು ಶ್ರಮಿಸಬೇಕು ಎಂದಿರುವ ಅವರು ಸ್ವದೇಶಿ ಇಂಧನ ಸಂಸ್ಥೆಗಳು ಬಹುರಾಷ್ಟ್ರೀಯ ಸಂಸ್ಥೆಗಳಾಗುವತ್ತ ಗುರಿ ನೆಡಬೇಕು ಎಂದು ಕರೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಇಂಧನ ಕ್ಷೇತ್ರದ ತೊಂದರೆಗಳನ್ನು ನಿವಾರಿಸಲು ಸಾಂಸ್ಥಿಕ ಪರಿಹಾರಗಳನ್ನು ಕಂಡುಕೊಳ್ಳುವತ್ತ ಗಮನ ಹರಿಸಬೇಕು. ರಾಷ್ಟ್ರದ ಯುವ ಸಮುದಾಯ ಹಾಗು ಕೌಶಲ್ಯ ಅಭಿವೃದ್ಧಿಯ ಮೇಲೆ ಸರ್ಕಾರದ ಗಮನ ಮುಂದಿನ ದಿನಗಳಲ್ಲಿ ಇಂಧನ ಕೊರತೆಯ ತೊಂದರೆಗಳನ್ನು ನಿವಾರಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited