ಮುಜಾಫರ್ ನಗರ : ರೇಪ್ ಯತ್ನಕ್ಕೆ ಪ್ರತಿರೋಧ ತೋರಿದ 30 ವರ್ಷದ ಮಹಿಳೆಯನ್ನು ಯುವಕ ಬೆಂಕಿ ಹಚ್ಚಿದ ಘಟನೆ ಮುಜಾಫರ್ ನಗರದ ಸಿಸೋಲಿ ಪಟ್ಟಣದಲ್ಲಿ ನಡೆದಿದೆ.
ತೀವ್ರ ಸುಟ್ಟಗಾಯಗಳಿಗೆ ಗುರಿಯಾಗಿರುವ ಸಂತ್ರಸ್ತ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆಕೆಯ ದೇಹ ಸ್ಥಿತಿಯು ಗಂಭೀರವಿದೆ ಎಂದು ಪೊಲೀಸರು ಹೇಳಿದ್ದಾರೆ.
ಬ್ಯಾಂಕ್ ಉದ್ಯೋಗಿಯೋರ್ವರ ಪತ್ನಿಯಾಗಿರುವ ಮಹಿಳೆಯು ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಶಿವಕುಮಾರ್ ಎಂಬ ಯುವಕ ಮನೆಯೊಳಗೆ ನುಗ್ಗಿ ಬಂದು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಆತನಿಗೆ ಪ್ರತಿರೋಧ ತೋರಿದಾಗ ಆತ ಆಕೆಗೆ ಬೆಂಕಿ ಹಚ್ಚಿದನು ಎಂದು ಹಿರಿಯ ಪೊಲೀಸ್ ಸುಪರಿಂಟೆಂಡೆಂಟ್ ಆಲೋಕ್ ಪ್ರಿಯದರ್ಶಿ ತಿಳಿಸಿದ್ದಾರೆ.
ರೇಪ್ ಗೆ ಯತ್ನಿಸಿ ಮಹಿಳೆಗೆ ಬೆಂಕಿ ಹಚ್ಚಿದ ಆರೋಪಿ ಶಿವಕುಮಾರ್ ಪರಾರಿಯಾಗಿದ್ದಾನೆ. ಆತನ ವಿರುದ್ಧ ರೇಪ್ ಮತ್ತು ಕೊಲೆ ಯತ್ನದ ಕೇಸನ್ನು ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.