Untitled Document
Sign Up | Login    
Dynamic website and Portals
  
March 24, 2015

ಸಿಂಗಾಪುರದ ಮಾಜಿ ಪ್ರಧಾನಿ ಲೀ ಕ್ವಾನ್‌ ಯು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಮೋದಿ

ಸಿಂಗಾಪುರದ ಮಾಜಿ ಪ್ರಧಾನಿ ಲೀ ಕ್ವಾನ್‌ ಯು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಮೋದಿ

ನವದೆಹಲಿ : ಸ್ವಾಯತ್ತ ಸಿಂಗಾಪುರದ ಮೊದಲ ಪ್ರಧಾನಿ ಲೀ ಕ್ವಾನ್‌ ಯು ಅವರ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಮಾ.29ರಂದು ಲೀ ಕ್ವಾನ್ ಯು ಅವರ ಅಂತ್ಯಕ್ರಿಯೆ ನಡೆಯಲಿದ್ದು ಮೋದಿ ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ.

ನ್ಯುಮೋನಿಯಾದಿಂದ ಬಳಸುತ್ತಿದ್ದ ಲೀ ಕ್ವಾನ್ ಯು, ಮಾ.23ರಂದು ನಿಧನರಾಗಿದ್ದರು. ಮಾ.25ರಿಂದ 28ರ ವರೆಗೆ ಲೀ ಕ್ವಾನ್ ಯು ಅವರ ಮೃತದೇಹವನ್ನು ಅಲ್ಲಿನ ಸಂಸತ್‌ ಭವನದಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇಡಲಾಗುತ್ತದೆ. ಬಳಿಕ ಮಾ.29ರಂದು ಅಂತ್ಯಕ್ರಿಯೆ ನಡೆಯಲಿದ್ದು ವಿದೇಶಗಳ ಗಣ್ಯರು ಭಾಗವಹಿಸಲಿದ್ದಾರೆ.

1965ರಲ್ಲಿ ಮಲೇಷ್ಯಾದಿಂದ ಸಿಂಗಪುರ ವಿಭಜನೆಗೊಂಡ ಸಂದರ್ಭದಲ್ಲಿ ಲೀ ಕ್ವಾನ್‌ ಅವರು ಸಿಂಗಪುರದ ಮುಂದಾಳತ್ವ ವಹಿಸಿಕೊಂಡು ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಯಾವುದೇ ರೀತಿಯ ನೈಸರ್ಗಿಕ ಸಂಪನ್ಮೂಲ ಹೊಂದಿಲ್ಲದ ಒಂದು ಸಣ್ಣ ನಗರವನ್ನು ಜಾಗತಿಕ ವ್ಯಾಪಾರ ಹಾಗೂ ಹಣಕಾಸು ಕೇಂದ್ರವನ್ನಾಗಿ ಪರಿವರ್ತಿ ಲೀ ಕ್ವಾನ್ ಯು ಅವರ ಸಾಧನೆಯಾಗಿದೆ. ಸಿಂಗಾಪುರದ ಮೊದಲ ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ ಎಂಬುದೂ ಸಹ ಲೀ ಅವರ ಮತ್ತೊಂದು ಹೆಗ್ಗಳಿಕೆ

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited