Untitled Document
Sign Up | Login    
Dynamic website and Portals
  
March 24, 2015

ದಕ್ಷಿಣ ಫ್ರಾನ್ಸ್ ನಲ್ಲಿ ವಿಮಾನ ಪತನ: 148 ಪ್ರಯಾಣಿಕರೂ ಸಾವು

ಬರ್ಲಿನ್‌ : 'ದಕ್ಷಿಣ ಫ್ರಾನ್ಸ್' ನಲ್ಲಿ ವಿಮಾನ ಪತನವಾಗಿದ್ದು ವಿಮಾನದಲ್ಲಿದ್ದ ಎಲ್ಲಾ 148 ಪ್ರಯಾಣಿಕರೂ ಸಾವನ್ನಪ್ಪಿದ್ದಾರೆ. ಪತನಗೊಂಡಿರುವ ವಿಮಾನ ಜರ್ಮನ್ ವಿಂಗ್ಸ್ ಏರ್ ವೇಸ್ ಗೆ ಸೇರಿದ್ದಾಗಿದೆ.

6 ಸಿಬ್ಬಂದಿಗಳು, 142 ಪ್ರಯಾಣಿಕರಿದ್ದ ಈ ವಿಮಾನ ಬಾರ್ಸಿಲೋನಾದಿಂದ ಡುಸೆಲ್ ಡೋರಫ್ ಕಡೆಗೆ ಪ್ರಯಾಣಿಸುತ್ತಿತ್ತು ಎಂದು ವರದಿಯಾಗಿದೆ. ಆಲ್ಫ್ ಪರ್ವತ ಶ್ರೇಣಿಯ ಗ್ರಾಮವೊಂದರ ಬಳಿ ವಿಮಾನದ ಅವಶೇಷ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿಮಾಡಿವೆ.

ಅಪಘಾತಕ್ಕೊಳಗಾಗಿರುವ A320 ಡಿ AIRX ವಿಮಾನ, ಸ್ಥಳೀಯ ಕಾಲಮಾನದ ಪ್ರಕಾರ 10:47ಕ್ಕೆ ಡಿಸ್ಟ್ರೆಸ್ ಸಿಗ್ನಲ್ ಕಳಿಸಿತ್ತು ಎಂದು ಪ್ರಥಮಿಕ ವರದಿಗಳಿಂದ ತಿಳಿದುಬಂದಿದೆ. ಅಲ್ಲದೇ ಈ ವಿಮಾನವನ್ನು 1990ರಲ್ಲಿ ಬಿಡುಗಡೆ ಮಾಡಲಾಗಿದ್ದು, A320ಯ ಅತ್ಯಂತ ಹಳೆಯ ವಿಮಾನವಾಗಿದೆ ಎಂದು ಹೇಳಲಾಗಿದೆ. ಯಾವ ಕಾರಣದಿಂದ ವಿಮಾನ ಸ್ಪೋಟಗೊಂಡು ಪತನವಾಗಿದೆ ಎನ್ನುವ ವಿಚಾರ ಇನ್ನಷ್ಟೆ ತಿಳಿದು ಬರಬೇಕಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited