Untitled Document
Sign Up | Login    
Dynamic website and Portals
  
September 30, 2015

ಮುಂಬೈ ಸರಣಿ ರೈಲು ಸ್ಪೋಟಃ ಐವರಿಗೆ ಗಲ್ಲು, ಏಳು ಮಂದಿಗೆ ಜೀವಾವಧಿ ಶಿಕ್ಷೆ

ಮುಂಬೈ : 2006ರಲ್ಲಿ ಸಂಭವಿಸಿದ ಮುಂಬೈ ಸರಣಿ ರೈಲು(7/11) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿ ದೋಷಿಗಳಲ್ಲಿ 5 ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ ಉಳಿದ 7 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮುಂಬೈನ ವಿಶೇಷ ಮೋಕಾ ಕೋರ್ಟ್ ಬುಧವಾರ ಶಿಕ್ಷೆಯನ್ನು ಪ್ರಕಟಿಸಿದೆ.

ರೈಲಿನೊಳಗೆ ಬಾಂಬ್ ಇಟ್ಟಿದ್ದ ಪ್ರಮುಖ ಆರೋಪಿಗಳಾದ ಇತೆಹಾಮ್ ಸಿದ್ದಿಕಿ (30 ವರ್ಷ), ಅಸಿಫ್ ಖಾನ್ (38), ಮೊಹಮ್ಮದ್ ಫೈಸಲ್ ಶೇಕ್ (36) , ನವೀದ್ ಹುಸೈನ್ ಖಾನ್ (30) ಮತ್ತು ಕಮಲ್ ಅಹ್ಮದ್ ಅನ್ಸಾರಿ (37ವರ್ಷ)ಗೆ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ.

2006 ರ ಜುಲೈ 11 ರಂದು 7 ರೈಲುಗಳನ್ನು ಆರ್ ಡಿ ಎಕ್ಸ್ ಬಾಂಬ್ ಇಟ್ಟು ಸ್ಫೋಟಗೊಳಿಸಿದ್ದರು. ಇದರಲ್ಲಿ 188 ಮಂದಿ ಸಾವನ್ನಪ್ಪಿದ್ದು, 829 ಪ್ರಯಾಣಿಕರಿಗೆ ಗಾಯಗಳಾಗಿತ್ತು. 9 ವರ್ಷಗಳ ಪ್ರಕರಣದ ತೀರ್ಪು ಹೊರಬಿದ್ದಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited