Untitled Document
Sign Up | Login    
Dynamic website and Portals
  
March 11, 2015

ಪ್ರಧಾನಿ ಮೋದಿ ಸಿಶೇಲ್ ಭೇಟಿ: ನಾಲ್ಕು ಮಹತ್ವದ ಒಪ್ಪಂದಗಳಿಗೆ ಸಹಿ

ಸಿಶೇಲ್ ಅಧ್ಯಕ್ಷರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಿಶೇಲ್ ಅಧ್ಯಕ್ಷರೊಂದಿಗೆ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ತ್ರಿರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸಿಶೇಲ್ ರಾಷ್ಟ್ರದೊಂದಿಗೆ ಮಾ.11ರಂದು ನಾಲ್ಕು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಜಲಮಾರ್ಗ ಸಮೀಕ್ಷಾ ಒಪ್ಪಂದ, ನವೀಕರಿಸಬಹುದಾದ ಇಂಧನ ಶಕ್ತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಮುದ್ರ ಯಾನಕ್ಕೆ ಸಂಬಂಧಿಸಿದ ನಾಲ್ಕು ವಿಷಯಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ಒಪ್ಪಂದ ನಡೆದಿದೆ. ಭಾರತದ ಭದ್ರತೆ ಮತ್ತು ಸಾಗರೋತ್ತರ ವ್ಯವಹಾರಗಳ ಅಭಿವೃದ್ಧಿ ದೃಷ್ಠಿಯಿಂದ ಈ ಒಪ್ಪಂದ ಮಹತ್ವ ಪಡೆದುಕೊಂಡಿದೆ.

ಇದೇ ವೇಳೆ ಸಿಶೇಲ್ ಅಧ್ಯಕ್ಷ ಜೇಮ್ಸ್ ಮೈಕಲ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಸಿಶೇಲ್ ಗೆ ಮತ್ತೊಂದು ಡ್ರೋಣ್ ವಿಮಾನವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಸಿಶೇಲ್ ಭಾರತದ ನಂಬಿಕಾರ್ಹ ಮಿತ್ರನಾಗಿದ್ದು, ಭದ್ರತಾ ವಿಷಯದಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಸಹಾಯ ಮಾಡಲಿವೆ ಎಂದು ಮೋದಿ ತಿಳಿಸಿದ್ದಾರೆ. ಸಾಗರ ಪ್ರದೇಶದ ಕಣ್ಗಾವಲಿಗಾಗಿ ರಡಾರ್ ವ್ಯವಸ್ಥೆ ಕೈಗೊಳ್ಳಲು ಸಹಕಾರ ನೀಡುವುದು ಸೇರಿದಂತೆ ಪ್ರಮುಖವಾಗಿ ಭದ್ರತಾ ವಿಚಾರಗಳಿಗೆ ಸಂಬಂಧಿಸಿದಂತೆಯೂ ಈ ವೇಳೆ ಒಪ್ಪಂದ ನಡೆದಿದೆ.

33 ವರ್ಷಗಳ ಬಳಿಕ ಸೀಶೆಲ್‌ಗೆ ಭೇಟಿ ನಿಡಿರುವ ಭಾರತದ ಮೊದಲ ಪ್ರಧಾನಿ ಮೋದಿ ಆಗಿದ್ದಾರೆ. ಸೀಶೆಲ್‌ ಗೆ 1981ರಲ್ಲಿ ಇಂದಿರಾ ಗಾಂಧಿ ಭೇಟಿ ನೀಡಿದ್ದ ಬಳಿಕ ಭಾರತದ ಯಾವುದೇ ಪ್ರಧಾನಿಯೂ ಅಲ್ಲಿಗೆ ಭೇಟಿ ನೀಡಿಲ್ಲ. ಸೀಶೆಲ್‌ ಭೇಟಿಯ ಬಳಿಕ ಮೋದಿ, ಮಾರಿಷಸ್‌ ಗೆ ತೆರಳಲಿದ್ದು, ಮಾ.12 ರಂದು ನಡೆಯಲಿರುವ ಸ್ವಾತಂತ್ರೊತ್ಸವದ ಮುಖ್ಯಅತಿಥಿಯಾಗಲಿದ್ದಾರೆ. ಆನಂತರ ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited