Untitled Document
Sign Up | Login    
Dynamic website and Portals
  
March 11, 2015

ಅರುಣ್ ಶೌರಿ ಅಥವಾ ಯಶ್ವಂತ್ ಸಿನ್ಹಾ ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷರಾಗುವ ಸಾಧ್ಯತೆ

ಅರುಣ್ ಶೌರಿ, ಯಶ್ವಂತ್ ಸಿನ್ಹಾ ಅರುಣ್ ಶೌರಿ, ಯಶ್ವಂತ್ ಸಿನ್ಹಾ

ನವದೆಹಲಿ : ಮಾಜಿ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ಅಥವಾ ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಅವರು ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷರಾಗುವ ಸಾಧ್ಯತೆ ಇದೆ.

ಬ್ರಿಕ್ಸ್ ಬ್ಯಾಂಕ್ ಗೆ ಮೊದಲ ಅಧ್ಯಕ್ಷರನ್ನು ನೇಮಿಸಿರುವ ಅಧಿಕಾರ ಭಾರತಕ್ಕೆಇದ್ದು, ಬ್ಯಾಂಕ್ ನ ಕೇಂದ್ರ ಕಚೇರಿ ಶಾಂಘೈನಲ್ಲಿ ಸ್ಥಾಪನೆಯಾಗಲಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಅಂತಾರಾಷ್ಟ್ರೀಯ ಹಣಕಾಸು ವಿಚಾರಗಳಲ್ಲಿ ಆಳವಾದ ಜ್ನಾನ ಹೊಂದಿರುವವರನ್ನು ಬ್ರಿಕ್ಸ್ ಬ್ಯಾಂಕ್ ಹೊಸ ಅಭಿವೃದ್ಧಿ ಬ್ಯಾಂಕ್ (ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್) ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಆರ್ಥಿಕತಜ್ಞರಾಗಿರುವ ಅರುಣ್ ಶೌರಿ, ಅಥವಾ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಯಶ್ವಂತ್ ಸಿನ್ಹಾ ಅವರನ್ನು ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷರಾಗಿ ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಬ್ಯಾಂಕ್ ನ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು, ಅಧಿಕಾರಿ ವರ್ಗಗಳಿಗಿಂತಲೂ ಆಡಾಳಿತಾತ್ಮಕ ಗುಣಗಳನ್ನು ಹೊಂದಿರುವ ರಾಜಕೀಯ ವ್ಯಕ್ತಿಯನ್ನೇ ಆಯ್ಕೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ತೀರ್ಮಾನ ಅಂತಿಮವಾಗಿದ್ದು, ಶೀಘ್ರವೇ ಅಧ್ಯಕ್ಷರ ನೇಮಕಾತಿ ಬಗ್ಗೆ ಪ್ರಧಾನಿ ನಿರ್ಧಾರ ಪ್ರಕಟಿಸಲಿದ್ದಾರೆ.

ಬ್ರಿಕ್ಸ್ ರಾಷ್ಟ್ರಗಳ ಹಣಕಾಸು ಸಚಿವರು ಏಪ್ರಿಲ್ ನಲ್ಲಿ ಸಭೆ ನಡೆಸಲಿದ್ದಾರೆ. ಬ್ರಿಕ್ಸ್ ರಾಷ್ಟ್ರಗಳ ಅಭಿವೃದ್ಧಿಗಾಗಿ ಬ್ಯಾಂಕ್ ಸ್ಥಾಪನಗೆ ತೀರ್ಮಾನಿಸಲಾಗಿದೆ.

ವಿಶ್ವದಲ್ಲಿ ಯಾವುದೇ ಮೂಲ ಸೌಕರ್ಯಗಳ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕಾಗಿದ್ದರೆ ಐಎಂಎಫ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಮತ್ತು ವಿಶ್ವಬ್ಯಾಂಕ್‌ ಗಳತ್ತ ನೋಡಬೇಕಾಗುತ್ತದೆ. ಈ ಬ್ಯಾಂಕ್‌ಗಳು ನೀಡುವ ಸಾಲದ ಬಗ್ಗೆ ಮತ್ತು ಅವುಗಳ ಕಾರ್ಯಶೈಲಿ ಬಗ್ಗೆ ನಮ್ಮ ದೇಶ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಅಪಸ್ವರ ಈಗಾಗಲೇ ಎದ್ದಿದೆ.

ಹೀಗಾಗಿ ಬ್ರಿಕ್ಸ್ ರಾಷ್ಟ್ರಗಳು ನ್ಯೂ ಡೆವಲಪ್‌ ಮೆಂಟ್ ಬ್ಯಾಂಕ್ ರಚಿಸಲು 2014ರ ಜುಲೈನಲ್ಲಿ ತೀರ್ಮಾನಿಸಿದ್ದವು. ಬ್ರಿಕ್ಸ್ ನ ಐದು ರಾಷ್ಟ್ರಗಳಲ್ಲಿ ಕೈಗೊಳ್ಳಲಾಗುವ ಎಲ್ಲ ಮೂಲ ಸೌಕರ್ಯ ಯೋಜನೆಗೆ ಈ ಬ್ಯಾಂಕ್‌ನಿಂದಲೇ ಒದಗಿಸಿಕೊಳ್ಳಲಾಗುತ್ತದೆ. ಈ ಮೂಲಕ ಪಾಶ್ಚಿಮಾತ್ಯ ಹಣಕಾಸು ವ್ಯವಸ್ಥೆಯನ್ನು ನಿಧಾನವಾಗಿ ನಿಲ್ಲಿಸಿ ಸ್ವಾವಲಂಬಿಯಾಗುವತ್ತ ದೃಢ ಹೆಜ್ಜೆಯಿಟ್ಟಂತಾಗುತ್ತದೆ.

ಭಾರತದವರೇ ಬ್ರಿಕ್ಸ್ ಬ್ಯಾಂಕ್ ನ ಪ್ರಥಮ ಅಧ್ಯಕ್ಷರಾಗುವುದು ವಿಶೇಷವಾಗಿದೆ. ಅಧ್ಯಕ್ಷರ ಅಧಿಕಾರದ ಅವಧಿ ಆರು ವರ್ಷ ಇರಲಿದ್ದು, ತನ್ನ ದೇಶದಲ್ಲಿ ಕೇಂದ್ರ ಕಚೇರಿ ಇದ್ದರೂ ಚೀನಾಕ್ಕೆ ಬ್ಯಾಂಕ್‌ ನ ಅಧ್ಯಕ್ಷ ಸ್ಥಾನ ಸಿಗಬೇಕಿದ್ದರೆ ಕನಿಷ್ಠ 15 ವರ್ಷ ಕಾಯಲೇಬೇಕು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited