Untitled Document
Sign Up | Login    
Dynamic website and Portals
  
February 19, 2015

ಜಮ್ಮು-ಕಾಶ್ಮೀರ ವಿಧಾನಪರಿಷತ್ ಗೆ ಬಿಜೆಪಿ, ಪಿಡಿಪಿಯ 5 ಸದಸ್ಯರ ಅವಿರೋಧ ಆಯ್ಕೆ

ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ' ವಿಧನಪರಿಷತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪಿಡಿಪಿಯ 5ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಬಿಜೆಪಿಯ ಇಬ್ಬರು ಸದಸ್ಯರು ಹಾಗೂ ಪಿಡಿಪಿಯ ಮೂವರು ಸದಸ್ಯರು ವಿಧಾನಪರಿಷತ್ ಗೆ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿ ಮಹಮದ್ ರಂಜಾನ್ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲು ತುದಿಗಾಲಲ್ಲಿ ನಿಂತಿರುವ ಉಭಯ ಪಕ್ಷಗಳೂ ವಿಧಾನಪರಿಷತ್ ಚುನಾವಣೆಗೆ ಮೈತ್ರಿ ಮಾಡಿಕೊಂಡು ಜಂಟಿಯಾಗಿ ಸ್ಪರ್ಧಿಸಿದ್ದವು.

ವಿಧಾನಪರಿಷತ್ ನ ಮತ್ತಷ್ಟು ಸ್ಥಾನಗಳಿಗೆ ಮಾರ್ಚ್ 2ರಂದು ಚುನಾವಣೆ ನಡೆಯಲಿದ್ದು ಎನ್.ಸಿ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ. ಎನ್.ಸಿ ಗೆ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಜಮ್ಮು-ಕಾಶ್ಮೀರದ ವಿಧಾನಸಭೆಯಲ್ಲಿ ಪಿಡಿಪಿ 28, ಬಿಜೆಪಿ 25, ನ್ಯಾಷನಲ್ ಕಾನ್ಫರೆನ್ಸ್ ಪಕ್ಷ 15, ಕಾಂಗ್ರೆಸ್ 12 ಸದಸ್ಯರ ಬಲ ಹೊಂದಿವೆ. ಬಲಿಷ್ಠ ಪಕ್ಷಗಳಾಗಿರುವ ಬಿಜೆಪಿ,ಪಿಡಿಪಿ ಮೈತ್ರಿಯಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎನ್.ಸಿಗೆ ಹಿನ್ನಡೆಯುಂಟಾಗುವ ಸಾಧ್ಯತೆ ದಟ್ಟವಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited