ಅಹಮದಾಬಾದ್ : ಸೊಹ್ರಾಬುದ್ದೀನ್ ಮತ್ತು ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣದಲ್ಲಿ 8 ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿದ್ದ ಗುಜರಾತ್ನ ಮಾಜಿ ಐಜಿಪಿ ಡಿ.ಜಿ.ವಂಜಾರಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಸಾಬರ್ಮತಿ ಜೈಲಿನಿಂದ ಹೊರ ಬಂದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಬಾಹ್ಯ ರಾಜಕೀಯ ದುರುದ್ದೇಶಗಳಿಂದ ಗುಜರಾತ್ ಪೊಲೀಸರನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ನನ್ನ ಹಾಗೂ ಇತರ ಪೊಲೀಸ್ ಅಧಿಕಾರಿಗಳ ಪಾಲಿಗೆ ಅಚ್ಛೇ ದಿನಗಳು ಮರಳುತ್ತಿವೆ ಎಂದು ತಿಳಿಸಿದ್ದಾರೆ.
ಇಶ್ರತ್ ಜಹಾನ್ ಪ್ರಕರಣದಲ್ಲಿ ವಂಜಾರಾ ಅವರಿಗೆ 10 ದಿನಗಳ ಹಿಂದೆ ಜಾಮೀನು ಮಂಜೂರಾಗಿತ್ತು. ಅವರು ಜೈಲಿನಲ್ಲಿದ್ದುದರಿಂದ ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಜಾಮೀನು ಬಾಂಡ್ಗಳನ್ನು ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಕೋರ್ಟ್ ನಿರ್ದೇಶನದಂತೆ ವಂಜಾರಾ ಇಂದು ಮುಂಬಯಿಗೆ ತೆರಳಲಿದ್ದಾರೆ.
ವಂಜಾರ ಅವರು ಜಾಮೀನು ಷರತ್ತುಗಳ ಅನ್ವಯ ತಿಂಗಳಲ್ಲಿ ಎರಡು ಬಾರಿ ಸಿಬಿಐ ಮುಂದೆ ಹಾಜರಾಗಬೇಕಿದೆ.