ಬೆಂಗಳೂರು : ಐಪಿಎಲ್ ಟ್ವೆಂಟಿ-20 ಪಂದ್ಯಾವಳಿಯ 8ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರನ್ನು 16 ಕೋಟಿ ಮೊತ್ತ ನೀಡಿ ಖರೀದಿಸುವ ಮೂಲಕ ಭಾರೀ ಮೊತ್ತ ನೀಡಿದೆ.
ಆಂಜಲೊ ಮ್ಯಾಥ್ಯೂಸ್ 7.5 ಕೋಟಿಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲಾಗಿದ್ದಾರೆ. ಮುರಳಿ ವಿಜಯ್ ಗೆ 3 ಕೋಟಿ ನೀಡಿ ಪಂಜಾಬ್ ಕಿಂಗ್ಸಿ ಇಲೆವೆನ್ ಖರೀದಿಸಿದೆ. ಕೆವಿನ್ ಪೀಟರ್ ಸನ್ - ಸನ್ ರೈಸ್ ಹೈದ್ರಾಬಾದ್ 2 ಕೋಟಿ ರೂ ನೀಡಿದ್ದರೆ, ದೆನೇಶ್ ಕಾರ್ತಿಕ್ ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 10.50 ಕೋಟಿ ರೂ ನೀಡಿದೆ. 3.2೦ ಕೋಟಿ ಗೆ ಆರೋನ್ ಫಿಂಚ್ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ. ಇನ್ನು ಕೇನ್ ವಿಲಿಯಮ್ಸ್ 60 ಲಕ್ಷಕ್ಕೆ ಸನ್ ರೈಸ್ ಹೈದ್ರಾಬಾದ್ ಗೆ ಬಿಕರಿಯಾಗಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ 78 ಭಾರತೀಯ ಆಟಗಾರರು 44 ವಿದೇಶಿ ಆಟಗಾರರು ಸೇರಿಂದತೆ ಒಟ್ಟು 122 ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.