Untitled Document
Sign Up | Login    
Dynamic website and Portals
  
February 14, 2015

ಸಾರ್ಕ್‌ ನಾಯಕರಿಗೆ ಪ್ರಧಾನಿ ಮೋದಿ ಕರೆ: ವಿಶ್ವಕಪ್‌ ಶುಭಾಶಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಪಾಕ್‌ ಪ್ರಧಾನಿ ನವಾಜ್‌ ಶರೀಪ್‌ ಸೇರಿದಂತೆ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವ ಸಾರ್ಕ್‌ ರಾಷ್ಟ್ರಗಳ ಮುಖಂಡರಿಗೆ ಕರೆ ಮಾಡಿ ಶುಭಕೋರಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮೋದಿ ಅಫ್ಘಾನ್‌ ಅಧ್ಯಕ್ಷ ಅಶ್ರಫ್ ಘನಿ, ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ, ಪಾಕ್‌ ಪ್ರಧಾನಿ ನವಾಜ್‌ ಶರೀಫ್ ಮತ್ತು ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ ಅವರಿಗೆ ಕರೆ ಮಾಡಿ ವಿಶ್ವಕಪ್‌ ಶುಭಾಶಯ ತಿಳಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

’5 ಸಾರ್ಕ್‌ ರಾಷ್ಟ್ರಗಳು ವಿಶ್ವಕಪ್‌ನಲ್ಲಿ ಆಟವಾಡುತ್ತಿರುವುದು ಹರ್ಷ ತಂದಿದೆ. ವಿಶ್ವಕಪ್‌ ನಲ್ಲಿ ಕ್ರೀಡಾ ಸ್ಪೂರ್ತಿ ಮೇಳೈಸಿ ಎಲ್ಲಾ ಕ್ರಿಕೆಟ್‌ ಅಭಿಮಾನಿಗಳಿಗೆ ಹಬ್ಬವಾಗುವ ವಿಶ್ವಾಸ ನನಗೆ ಇದೆ’ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್‌ ನಮ್ಮ ನಡುವಿನ ಬಾಂಧವ್ಯ ವೃದ್ದಿಸಲು ಸಹಕಾರಿಯಾಗಲಿದೆ. ಸಾರ್ಕ್‌ ದೇಶದ ಎಲ್ಲಾ ಕ್ರಿಕೆಟಿಗರು ಪ್ರಶಸ್ತಿ ಪಡೆಯಲು ಉತ್ಸಾಹದಿಂದ ಆಟವಾಡುವ ವಿಶ್ವಾಸ ನನಗಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಅಲ್ಲದೆ ನಮ್ಮ ನೂತನ ವಿದೇಶಾಂಗ ಕಾರ್ಯದರ್ಶಿ ಎಸ್‌.ಜೈ ಶಂಕರ್‌ ಅವರು ಶೀಘ್ರದಲ್ಲಿ ಸಾರ್ಕ್‌ ದೇಶಗಳ ಬಾಂಧವ್ಯಗಳನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಸಾರ್ಕ್‌ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.

ವಿಶ್ವಕಪ್‌ಗೆ ಗುರುವಾರ ಅದ್ದೂರಿ ಚಾಲನೆ ದೊರೆತ ನಂತರ ಮೋದಿ ಅವರು ಭಾರತದ ಪ್ರತಿಯೊಬ್ಬ ಆಟಗಾರನಿಗೂ ಪ್ರತ್ಯೇಕವಾಗಿ ಟ್ವೀಟ್‌ ಮಾಡಿ ಶುಭಾಶಯ ಕೋರಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ಕುತೂಹಲದಿಂದ ಕೂಡಿದ ಅತ್ಯಂತ ರೋಚಕ ಪಂದ್ಯ ಫೆಬ್ರವರಿ 15 ರವಿವಾರ ನಡೆಯಲಿದೆ.

ಶರೀಫ್ ಅವರಿಗೆ ಅಮೇರಿಕಾ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಕರೆ ಮಾಡಿ ವೈಟ್‌ ಹೌಸ್‌ನಲ್ಲಿ ಮಾತುಕತೆಗೆ ಬರುವಂತೆ ಆಹ್ವಾನ ನೀಡಿದ ಕೆಲವೆ ಗಂಟೆಗಳಲ್ಲಿ ಮೋದಿ ಕರೆ ಮಾಡಿದ್ದಾರೆ.

ಒಬಾಮಾ ಕರೆಗೆ ಸ್ಪಂದಿಸಿರುವ ಶರೀಫ್ ಮಾತಕತೆಗೆ ಆಗಮಿಸಲಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited