ನವದೆಹಲಿ : ಆಮ್ ಆದ್ಮಿ ಪಕ್ಷ ಹಾಗೂ ಅರವಿಂದ್ ಕೇಜ್ರಿವಾಲ್ ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಟೀಕಿಸಿದ್ದಾರೆ.
2013ರಲ್ಲಿ ದೆಹಲಿಯಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಅರವಿಂದ್ ಕೇಜ್ರಿವಾಲ್ ಗೆ ಸಹಾಯ ನೀಡುವ ಮೂಲಕ 'ಕಡಿಮೆ ಕೆಡುಕನ್ನು' ಆಯ್ಕೆ ಮಾಡಿಕೊಂಡಿತ್ತು ಎಂದು ದಿಗ್ವಿಜಯ್ ಟ್ವಿಟ್ ಮಾಡಿದ್ದಾರೆ.
ಆಪ್ ಮತ್ತು ಕೇಜ್ರಿವಾಲ್ ಬಿಜೆಪಿಯ ಬಿ ಟೀಂ. ಹಾಗಾದರೆ ನಾವ್ಯಾಕೆ ಆಪ್ ಗೆ ಬೆಂಬಲ ನೀಡಿದೆವು? ಎಂದು ನೀವು ಕೇಳಬಹುದು. ಬಿಜೆಪಿ ಮತ್ತು ಬಿ-ಟೀಂ ನ ನಡುವಿರುವವರನ್ನು ನಮಗೆ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಅದಕ್ಕೆ ನಾವು ಕಡಿಮೆ ಕೆಡುಕಿರುವುದನ್ನು ಆಯ್ಕೆ ಮಾಡಿದೆವು ಎಂದು ಹೇಳಿದ್ದಾರೆ.
ಈ ನಡುವೆ ಆಮ್ ಆದ್ಮಿ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಹೇಳಿರುವ ದಿಗ್ವಿಜಯ್ ಸಿಂಗ್ ಅವರ ಹೇಳಿಕೆ ಹಾಸ್ಯಾಸ್ಪದ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. ಇದು ಕಾಂಗ್ರೆಸ್ ಗೆ ತಿಳಿದಿದ್ದರೆ ದೆಹಲಿಯಲ್ಲಿ ಸರ್ಕಾರ ರಚಿಸುವಾಗ ಕಾಂಗ್ರೆಸ್ ಆಪ್ ಗೆ ಬೆಂಬಲ ನೀಡಿದ್ದು ಯಾಕೆ ಎಂದು ಬಿಜೆಪಿ ಪ್ರಶ್ನಿಸಿದೆ.