ನವದೆಹಲಿ : ರಾಹುಲ್ ಗಾಂಧಿ ಈಗಾಗಲೇ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಅಧಿಕೃತ ಘೊಷಣೆಯಷ್ಟೇ ಬಾಕಿಯಿದೆ ಎಂದು ಪಕ್ಷದ ಹಿರಿಯ ನಾಯಕ ಜೈರಾಂ ರಮೇಶ್ ಹೇಳಿದ್ದಾರೆ.
ಪಕ್ಷದಲ್ಲಿ ಬದಲಾವಣೆಯ ಸಮಯ ಬಂದಿದೆ. ಯುವನಾಯಕ ರಾಹುಲ್ ಅಧಿಕಾರ ಸ್ವೀಕರಿಸುವುದರಿಂದ ಪಕ್ಷ ಮತ್ತೆ ಸುಧಾರಣೆಯತ್ತ ಸಾಗಲಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಪಕ್ಷದಲ್ಲಿ ನಾಯಕತ್ವ ಬದಲಾವಣೆಗೆ ಸೂಕ್ತ ಕಾಲವಾಗಿದೆ ಎಂದಿದ್ದಾರೆ.
ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಮತ್ತೆ ಬಲಸಾಧಿಸಲಿದೆ ಎಂದು ಅಭಿಪ್ರಾಯಪಟ್ಟಿದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಪ್ರಕಾರ, ಕಾಂಗ್ರೆಸ್ನಲ್ಲಿ ಹಳೆ ಪೀಳಿಗೆಯ ನಾಯಕರು ಹಿಂದೆ ಸರಿದು ಹೊಸಬರು ಬರಬೇಕು ಎಂದು ಹೇಳಿದ್ದಾರೆ.
ಕಳೆದು ಹೋಗಿರುವ ಪಕ್ಷದ ವೈಭವ ಮರಳಿಸುವ ಕೌಶಲ್ಯ ರಾಹುಲ್ ಗಾಂಧಿ ಅವರಿಗೆ ಇದೆ. ಆದರೆ ಯಾವುದಕ್ಕೂ ಸೋನಿಯಾ ಗಾಂಧಿ ನಿರ್ಣಯ ಅಂತಿಮ ಎಂದು ಹೇಳಿದ್ದಾರೆ.