ನವದೆಹಲಿ : ಆರ್ಥಿಕತೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿರುವುದು ಹಾಗೂ ಜಗತ್ತಿನಾದ್ಯಂತ ಭಾರತ 2ನೇ ವಿಶ್ವಾಸಾರ್ಹವಾದ ರಾಷ್ಟ್ರ ಎಂಬ ವರದಿ ಬಂದ ನಂತರ ಭಾರತದ ಬಗ್ಗೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಮೀಕ್ಷೆ ಹೊರಬಿದ್ದಿದೆ.
ಜೀವನ ವೆಚ್ಚಕ್ಕೆ ಸಂಬಂಧಿಸಿದಂತೆ ಹೊಸದಾಗಿ ಬಿಡುಗಡೆಯಾಗಿರುವ ಜಾಗತಿಕ ವರದಿಯ ಪ್ರಕಾರ ಭಾರತದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಜೀವನ ನಡೆಸಬಹುದು ಎಂದು (cost of living) ತಿಳಿದುಬಂದಿದೆ. ಭಾರತದಲ್ಲಿ ಅತಿ ಕಡಿಮೆ ಜೀವನ ವೆಚ್ಚವಿದ್ದರೆ ಸ್ವಿಜರ್ಲ್ಯಾಂಡ್ ನಲ್ಲಿ ಅತಿ ದುಬಾರಿ ಜೀವನ ವೆಚ್ಚವಿದೆ.
ಈ ಸಮೀಕ್ಷೆಯಲ್ಲಿ ನಾರ್ವೆ, ಡೆನ್ ಮಾರ್ಕ್ ರಾಷ್ಟ್ರಗಳು ಟಾಪ್ 5 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನಪಡೆದಿವೆ. ನ್ಯೂಯಾರ್ಕ್ ಜೀವನ ವೆಚ್ಚವನ್ನು ಇತರ ರಾಷ್ಟ್ರಗಳೊಂದಿಗೆ ಹೋಲಿಸಿ ಅತಿ ಕಡಿಮೆ ಜೀವನ ವೆಚ್ಚ ಹೊಂದಿರುವ ರಾಷ್ಟ್ರಗಳನ್ನು ಘೋಷಿಸಲಾಗಿದೆ.
ಅಚ್ಚರಿಯೆಂದರೆ ಭಾರತ ಅತ್ಯಂತ ಕಡಿಮೆ ಜೀವನ ವೆಚ್ಚ ಹೊಂದಿದೆಯಾದರೂ, ನೆರೆ ರಾಷ್ಟ್ರಗಳಾದ ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿನ ಜೀವನ ವೆಚ್ಚ ಭಾರತಕ್ಕಿಂತಲೂ ಅಧಿಕವಾಗಿದೆ.