ನವದೆಹಲಿ : 'ಪೆಟ್ರೋಲ್', ಡೀಸೆಲ್ ಬೆಲೆ ಮತ್ತೆ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 2.42 ಪೈಸೆ ಇಳಿಕೆಯಾಗಿದ್ದರೆ ಪ್ರತಿ ಲೀಟರ್ ಡಿಸೇಲ್ ದರ 2.25 ಪೈಸೆ ಇಳಿಕೆಯಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಕೆಯಾದ ಹಿನ್ನಲೆಯಲ್ಲಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡಿವೆ. ಇತ್ತೀಚೆಗಷ್ಟೇ ಪ್ರತೀ ಬ್ಯಾರೆಲ್ ಪೆಟ್ರೋಲ್, ಡೀಸೆಲ್ ದರ 45 ಡಾಲರ್ ಗಳಿಗಿಂತಲೂ ಕಡಿಮೆಯಾಗಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಇತ್ತು.
ಕಳೆದ ಜೂನ್ ತಿಂಗಳಿನಿಂದಲೂ ಕಚ್ಛಾ ತೈಲದ ದರ ಇಳಿಕೆಯತ್ತ ಮುಖ ಮಾಡಿದೆ. ಜ.16ರಂದು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2ರೂಪಾಯಿ ಏರಿಕೆ ಮಾಡಿತ್ತು. ಆದಾಗ್ಯೂ ಪೆಟ್ರೋಲ್, ಡೀಸೆಲ್ ದರ 2 ರೂಪಾಯಿ ಇಳಿಕೆಯಾಗಿರುವುದು ವಾಹನ ಸವಾರರಲ್ಲಿ ಅತೀವ ಸಂತಸ ಉಂಟುಮಾಡಿದೆ.