Untitled Document
Sign Up | Login    
Dynamic website and Portals
  
January 16, 2015

ಮುಂಬೈ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಉಗ್ರರ ಬೆದರಿಕೆ ಸಂದೇಶ ಪತ್ತೆ

ಮುಂಬೈ : 'ಮುಂಬೈವಿಮಾನ ನಿಲ್ದಾಣ'ದಲ್ಲಿ ಮತ್ತೊಮ್ಮೆ ಉಗ್ರರ ಬೆದರಿಕೆ ಸಂದೇಶ ಪತ್ತೆಯಾಗಿದೆ. ಗಣರಾಜ್ಯೋತ್ಸವ ದಿನದಂದು ದಾಳಿ ನಡೆಸುತ್ತೇವೆ ಎಂದು ಇಸ್ಲಾಮಿಕ್ ರಾಷ್ಟ್ರ (ಇಸಿಸ್) ಸಂಘಟನೆ ಬರೆದ ಬೆದರಿಕೆ ಹಾಕಿದೆ.

ವಿಮಾನ ನಿಲ್ದಾಣಶೌಚಾಲಯದಲ್ಲಿ ಈ ಬೆದರಿಕೆ ಸಂದೇಶ ಪತ್ತೆಯಾಗಿದೆ. ಈ ಹಿಂದೆಯೂ ಸಹ ಐ.ಎಸ್.ಐ.ಎಸ್ ಉಗ್ರರು ದಾಳಿ ನಡೆಸುವ ಬಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬೆದರಿಕೆ ಸಂದೇಶ ಪತ್ತೆಯಾಗಿತ್ತು. ಜ.10ರಂದು ಉಗ್ರ ಕೃತ್ಯ ನಡೆಸುವುದಾಗಿ ಐ.ಎಸ್.ಐ.ಎಸ್ ಸಂಘಟನೆ ಹೇಳಿತ್ತು.

ಈ ಬಾರಿ ವಿಮಾನ ನಿಲ್ದಾಣದ ಟರ್ಮಿನಲ್ 1A ಯಲ್ಲಿರುವ ಶೌಚಾಲಯದ ಗೋಡೆಯಲ್ಲಿ ಬೆದರಿಕೆ ಸಂದೇಶ ಪತ್ತೆಯಾಗಿದೆ. ಜನವರಿ 7ರಂದು 2 A ಯಲ್ಲಿರುವ ಶೌಚಾಲಯದ ಗೋಡೆಯಲ್ಲಿ ಇಸಿಸ್ ಬೆದರಿಕೆ ಸಂದೇಶ ಪತ್ತೆಯಾಗಿತ್ತು.

ಎರಡೆರಡು ಬಾರಿ ಬೆದರಿಕೆ ಸಂದೇಶ ಸಿಕ್ಕಿರುವುದರಿಂದ ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited