Untitled Document
Sign Up | Login    
Dynamic website and Portals
  
January 14, 2015

ಇಸ್ಲಾಮಿಕ್ ಸ್ಟೇಟ್ ಸೇರಿರುವ 5000 ಯುರೋಪಿಯನ್ನರು!

ಇಸ್ಲಾಮಿಕ್ ಸ್ಟೇಟ್ ಸೇರಿರುವ 5000 ಯುರೋಪಿಯನ್ನರು!

ಲಂಡನ್ : 'ಭಯೋತ್ಪಾದನೆ' ಯುರೋಪ್ ಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದು ಸುಮಾರು 5000 ಯುರೋಪಿಯನ್ನರು ಇಸ್ಲಾಮಿಕ್ ಸ್ಟೇಟ್ ತಂಡ ಸೇರಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಯುರೋಪ್ ನಿಂದ ಇಸ್ಲಾಮಿಕ್ ಸ್ಟೇಟ್ ಗೆ ಸೇರಿರುವ ಬಗ್ಗೆ ಮಾಹಿತಿ ನೀಡಿರುವ ಯುರೋಪ್ ನ ಪೊಲೀಸ್ ಸಂಸ್ಥೆ ಯುರೋಪೋಲ್, ಸುಮಾರು 3000-5000 ಯುರೋಪಿಯನ್ನರು ಉಗ್ರ ಸಂಘಟನೆ ಸೇರಿದ್ದಾರೆ ಎಂದು ತಿಳಿಸಿದೆ.

ದೇಶದ ಯುವಜನತೆ ಉಗ್ರ ಸಂಘಟನೆಯೊಂದಿಗೆ ಕೈಜೋಡಿಸಿದ್ದಾರೆ. ಒಂದು ವೇಳೆ ಅವರು ಇಸ್ಲಾಮಿಕ್ ಸ್ಟೇಟ್ಸ್ ನಿಂದ ವಾಪಸ್ಸಾದರೆ ದೇಶಕ್ಕೆ ಅಪಾಯ ಸಂಭವಿಸುವ ಸಾಧ್ಯತೆಗಳಿವೆ ಎಂದು ಯುರೋಪೋಲ್ ಆತಂಕ ವ್ಯಕ್ತಪಡಿಸಿದೆ. ಇಸ್ಲಾಮಿಕ್ ಸ್ಟೇಟ್ಸ್ ನಿಂದ ವಾಪಸ್ಸಾಗಿ ದೇಶದಲ್ಲಿ ಪ್ಯಾರೀಸ್ ಮಾದರಿಯ ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟಲು ಪೊಲೀಸರು ಶ್ರಮಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

9/11 ಘಟನೆಯಾದ ಬಳಿಕ ಯುರೋಪ್ ಅತಿ ಹೆಚ್ಚು ಭಯೋತ್ಪಾದಕರ ಭೀತಿ ಎದುರಿಸುತ್ತಿದ್ದು, ಸಾಕಷ್ಟು ಕಟ್ಟೆಚ್ಚರ ವಹಿಸಬೇಕೆಂದು ಯುರೋಪೋಲ್ ನ ಮುಖ್ಯಸ್ಥ ವೇಯ್ನ್ ರೈಟ್ ಸೂಚನೆ ನೀಡಿದ್ದಾರೆ. ಭಯೋತ್ಪಾದಕರು ತಮ್ಮ ಕೃತ್ಯಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅಂತರ್ಜಾಲವನ್ನು ಬಳಸಿಕೊಳ್ಳುತ್ತಿದ್ದಾರೆ. ಯುರೋಪ್ ನ ಭದ್ರತಾ ಸಿಬ್ಬಂದಿಗಳು ಈವರೆಗೂ 2,500 ಶಂಕಿತ ಉಗ್ರರ ಹೆಸರನ್ನು ಪಟ್ಟಿ ಮಾಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited