ಕಲ್ಬುರ್ಗಿ : 'ಕರ್ನಾಟಕ'ದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಕಲ್ಬುರ್ಗಿ ಮೂಲದ ವ್ಯಕ್ತಿಯೋರ್ವನ ಫೇಸ್ ಬುಕ್ ಖಾತೆ ಚಿತ್ರದಲ್ಲಿ ಉಗ್ರ ಒಸಾಮ ಬಿನ್ ಲ್ಯಾಡನ್ ನ ಚಿತ್ರ ಕಾಣಿಸಿಕೊಂಡಿರುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.
ಪ್ರೊಫೈಲ್ ಚಿತ್ರಕ್ಕೆ ಒಸಾಮಾ ಬಿನ್ ಲ್ಯಾಡನ್ ಚಿತ್ರವನ್ನು ಬಳಸಿರುವುದು ಆತಂಕಕ್ಕೆ ಕಾರಣವಾಗಿರುವ ವಿಷಯವಾಗಿದೆ. ಕಲ್ಬುರ್ಗಿಯ ಮಳಖೇಡಾದ ಸಿಕಂದರ್ ಮೊಘಲ್ ಎಂಬಾತ ಬುಕ್ ನಲ್ಲಿ ಲಾಡೆನ್ ಭಾವಚಿತ್ರವನ್ನು ಹಾಕಿದ್ದು ಮಾತ್ರವಲ್ಲದೇ ಪ್ರಚೋದನಾತ್ಮಕ ಹೇಳಿಕೆಗಳ ಪೋಸ್ಟ್ ಅಪ್ ಡೇಟ್ ಮಾಡಿದ್ದಾನೆ.
ಈ ವಿಚಾರ ಈಗಾಗಲೇ ಕಲಬುರಗಿ ಪರಿಸರದ ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಸಿಕಂದರ್ ನನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಚೋದನಾಕಾರಿ ಹೇಳಿಕೆಗಳ ಪೋಸ್ಟ್ ಅಪ್ ಡೇಟ್ ಮಾಡಿರುವುದರ ಬಗ್ಗೆ ಸೈಬರ್ ಕ್ರೈಮ್ ವಿಭಾಗದ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕಾಗಿದೆ.