ಪ್ಯಾರಿಸ್ : ಪ್ಯಾರಿಸ್ ನ ಪತ್ರಿಕಾ ಕಛೇರಿಯಲ್ಲಿ ಉಗ್ರರು ಅಟ್ಟಹಾಸ ಮೆರೆದು 12 ಜನರನ್ನು ಬಲಿಪಡೆದುಕೊಂಡಿರುವ ಬೆನ್ನಲ್ಲೇ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದೆ.
ದಕ್ಷಿಣ ಪ್ಯಾರಿಸ್ ಪ್ರಾಂತ್ಯದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಪೊಲೀಸರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾನೆ.
ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗಂಭೀರ ಗಾಯಗಳಾಗಿವೆ. ಪೊಲೀಸರ ಮೇಲೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳು ಬಳಿಕ ಮೆಟ್ರೋದಲ್ಲಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಈ ನಿಟ್ಟಿನಲ್ಲಿ ದಾಳಿಕೋರರಿಗಾಗಿ ಮೆಟ್ರೋದಲ್ಲಿ ಪೊಲೀಸರಿಂದ ಶೋಧ ಕಾರ್ಯ ಆರಂಭವಾಗಿದೆ.
ಜ.7ರಂದು ಪರ್ತಕರ್ತರನ್ನು ಗುರಿಯಾಗಿಸಿಕೊಂಡು ಚಾರ್ಲೆ ಹೆಬ್ಡೂ ಪತ್ರಿಕಾ ಕಛೇರಿಯ ಮೇಲೆ ಉಗ್ರರು ಅಟ್ಟಹಾಸ ಮೆರೆದಿದ್ದರು. ಘಟನೆಯಲ್ಲಿ 12 ಜನರು ಬಲಿಯಾಗಿದ್ದರು. ಇಂದು ಪೊಲೀಸರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.