ಲಖ್ನೌ : ದೇಶಾದ್ಯಂತ ಪಿಕೆ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದ್ದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪಿಕೆ ಚಿತ್ರವನ್ನು ಉತ್ತಮ ಪ್ರೇರಣಾತ್ಮಕ ಚಿತ್ರ ಎಂದು ಬಣ್ಣಿಸಿದ್ದಾರೆ.
ಪಿಕೆ ಉತ್ತಮ ಮೌಲ್ಯಗಳನ್ನು ಹೊಂದಿರುವ ಚಿತ್ರ ಆದ್ದರಿಂದ ರಾಜ್ಯದಲ್ಲಿ ಪಿಕೆ ಚಿತ್ರಕ್ಕೆ ಮನರಂಜನಾ ತೆರಿಗೆಯನ್ನು ಮುಕ್ತಗೊಳಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಪಿಕೆ ಚಿತ್ರಕ್ಕೆ ಮನರಂಜನಾ ತೆರಿಗೆಯಿಂದ ವಿನಾಯಿತಿ ದೊರೆತಿದೆ.
ಮತ್ತೊಂದೆಡೆ ಪಿಕೆ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಪರ ಸಂಘಟನೆಗಳು ಡಿ.31ರಂದೂ ಪ್ರತಿಭಟನೆ ನಡೆಸುತ್ತಿವೆ. ಪಿಕೆ ಚಿತ್ರ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿರುವಾಗಲೇ ಉತ್ತರ ಪ್ರದೇಶ ಸಿ.ಎಂ ಪಿಕೆ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದೂ ಅಲ್ಲದೇ ತೆರಿಗೆ ವಿನಾಯಿತಿ ನೀಡಿರುವುದು ಅಚ್ಚರಿ ಮೂಡಿಸಿದೆ.