ಬಿಜೀಂಗ್ : ದೇಶದ ವಿಶ್ವವಿದ್ಯಾಲಯಗಳಲ್ಲಿ ಕಮ್ಯುನಿಸ್ಟ್ ಪಕ್ಷ ಹೆಚ್ಚಿನ ಹತೋಟಿ ಸಾಧಿಸಬೇಕು ಎಂದು ಚೈನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕರೆ ನೀಡಿದ್ದಾರೆ.
ಪಕ್ಷದ ಮೂಲ ಸಿದ್ಧಾಂತ ಮಾರ್ಕ್ಸ್ ವಾದವನ್ನು ಕಾಲೇಜುಗಳಲ್ಲಿ ಹೆಚ್ಚೆಚ್ಚು ಪ್ರಚಾರ ಮಾಡಬೇಕು ಮತ್ತು ಸಿದ್ಧಾಂತವನ್ನು ಹೆಚ್ಚು ತಿಳಿಸಬೇಕು ಎಂದು ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.
"ಪಕ್ಷದ ನಾಯಕತ್ವವನ್ನು ಬಲಪಡಿಸುವುದರಿಂದ ಮತ್ತು ವಿಶ್ವವಿದ್ಯಾಲಯಗಳಲ್ಲಿ ಪಕ್ಷವನ್ನು ಕಟ್ಟುವುದರಿಂದ, ಚೈನಾದಲ್ಲಿ ಸಮಾಜವಾದಿ ವಿಶ್ವವಿದ್ಯಾಲಯಗಳನ್ನು ನಡೆಸುವ ಮೂಲ ಬದ್ಧತೆ ಈಡೇರುತ್ತದೆ" ಎಂದು ಕ್ಸಿ ತಿಳಿಸಿದ್ದಾರೆ.
ಕ್ಸಿ ಅವರ ಆಡಳಿತಾವಧಿಯಲ್ಲಿ, ಕಲಾವಿದರು, ಚರ್ಚ್ ಗಳು ಮತ್ತು ಇತರ ಸಂಸ್ಥೆಗಳು ಮಾರ್ಕ್ಸ್ ವಾದದ ತರಬೇತಿ ಕಡ್ಡಾಯ ಮಾಡಿದ್ದು, ಸೈದ್ಧಾಂತಿಕ ಬಿಗಿ ಹಿಡಿತವನ್ನು ಆಡಳಿತ ಸರ್ಕಾರದಡಿ ಹೆಚ್ಚಿಸಿದ್ದಾರೆ.