Untitled Document
Sign Up | Login    
Dynamic website and Portals
  
December 24, 2014

ದೆಹಲಿಯಲ್ಲಿ ಬಿಜೆಪಿಗೆ ಸೂಕ್ತ ನಾಯಕತ್ವ ಇಲ್ಲ: ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್ ಅರವಿಂದ್ ಕೇಜ್ರಿವಾಲ್

ನವದೆಹಲಿ : 'ಜಮ್ಮು-ಕಾಶ್ಮೀರ', ಜಾರ್ಖಂಡ್ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ದೆಹಲಿ ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೆಹಲಿ ಬಿಜೆಪಿಯಲ್ಲಿ ಸೂಕ್ತ ನಾಯಕತ್ವ, ಅಜೆಂಡಾ ಇಲ್ಲ, ಬಿಜೆಪಿಯದ್ದು ಪಲಾಯನವಾದಿ ತತ್ವ ಆದ್ದರಿಂದ ದೆಹಲಿಯಲ್ಲಿ ಬಿಜೆಪಿಗೆ ಜನತೆ ಮತ ನೀಡುವುದಿಲ್ಲ ಎಂದು ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.

ದೇಶಾದ್ಯಂತ ಅಧಿಕಾರಕ್ಕೆ ಬರುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಜಾರ್ಖಂಡ್ ಹಾಗೂ ಜಮ್ಮು-ಕಾಶ್ಮೀರಚುನಾವಣೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಸೀಟುಗಳನ್ನು ಪಡೆದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ವಿರೋಧ ಪಕ್ಷಗಳು ಅರವಿಂದ್ ಕೇಜ್ರಿವಾಲ್ ಅವರನ್ನು ಪಲಾಯನವಾದಿ ಎಂದು ಟೀಕಿಸುತ್ತಿದ್ದವು. ಇದಕ್ಕೆ ತಿರುಗೇಟು ನೀಡಿರುವ ಅರವಿಂದ್ ಕೇಜ್ರಿವಾಲ್ ಬಿಜೆಪಿಯದ್ದೂ ಪಲಾಯನವಾದಿ ತತ್ವ ಎಂದು ಟೀಕಿಸಿದ್ದಾರೆ.

ಜನಾಭಿಪ್ರಾಯ ಸಮೀಕ್ಷೆಯನ್ನು ಉದಾಹರಿಸಿರುವ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಶೇ.48ರಷ್ಟು ಜನರು ಆಮ್ ಆದ್ಮಿ ಪಕ್ಷದ ಪರವಾಗಿದ್ದಾರೆ ಎಂದು ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited