ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ದಲ್ಲಿ ಬಿಜೆಪಿ ತನ್ನ ಮಿಷನ್-44 ಯೋಜನೆಯನ್ನು ಯಶಸ್ವಿಗೊಳಿಸಲು ಸಾಧ್ಯವಾಗದೇ ಇರಬಹುದು ಆದರೆ ಕೇಸರಿ ಪಡೆ ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಶೇಕಡವಾರು ಮತ ಪಡೆದಿರುವ ಪಕ್ಷವಾಗಿ ಹೊರಹೊಮ್ಮಿದೆ.
ಡಿ.23ರಂದು ನಡೆದಿರುವ ಮತ ಎಣಿಕೆಯಲ್ಲಿ ಶೇಕಡಾವಾರು ಮತ ಬಿಜೆಪಿಗೆ ಹೆಚ್ಚು ದೊರೆತಿದ್ದು ಶೇ.23 ರಷ್ಟು(10, 99,961ಮತಗಳು) ಮತ ಪಕ್ಷದ ಪಾಲಾಗಿದೆ. ಇನ್ನು ರಾಜ್ಯದ ಅತಿದೊಡ್ಡ ಪಕ್ಷವಾಗಿರುವ ಪಿಡಿಪಿಗೆ ಶೇ.22.6ರಷ್ಟು(10,83,388)ಮತ ದೊರೆತಿದೆ. ಇನ್ನು ಆಡಳಿತಾರೂಡ ಎನ್.ಸಿ ಗೆ ಶೇ.20ರಷ್ಟು(9,90,532) ಮತಗಳನ್ನು ಪಡೆದಿದೆ.
ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಗೆ ಅತಿ ಕಡಿಮೆ, ಶೇ.6.8(32,7,807)ಮತಗಳು ರಷ್ಟು ಮತ ದೊರೆತಿದೆ. ಉಭಯ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಹ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಅತಿ ಹೆಚ್ಚು ಶೇಕಡಾವಾರು ಮತ ಪಡೆದಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಗೆ ಮಿಷನ್ 44 ತಲುಪಲು ಸಾಧ್ಯವಾಗದಿದ್ದರೂ ಸಹ ಅತಿಹೆಚ್ಚು ಶೇಕಡಾವಾರು ಮತ ಪಡೆಯುವ ಮೂಲಕ ರಾಜ್ಯದಲ್ಲಿ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದೆ.