Untitled Document
Sign Up | Login    
Dynamic website and Portals
  
December 11, 2014

ಪಾಕ್ ನಿಂದ 50 ಭಾರತೀಯ ಮೀನುಗಾರರ ಬಂಧನ

ನವದೆಹಲಿ : 50 ಮಂದಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಗುರುವಾರ ಬಂಧಿಸಿದ್ದು, 10 ಹಡಗುಗಳನ್ನು ವಶಪಡಿಸಿಕೊಂಡಿದೆ.

ಅಂತರಾಷ್ಟ್ರೀಯ ಸಮುದ್ರ ಗಡಿ ದಾಟಿದ ಆರೋಪದ ಮೇಲೆ 50 ಭಾರತೀಯ ಮೀನುಗಾರರನ್ನು ಬಂಧಿಸಿರುವ ಪಾಕ್, 10 ಹಡಗುಗಳನ್ನು ವಶಪಡಿಸಿಕೊಂಡಿದೆ. ಮೀನುಗಾರರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಮೀನುಗಾರರ ವಿರುದ್ಧ ದೇಶದ ಸಮುದ್ರ ಸಂಬಂಧಿ ಗಡಿ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಲು ಪಾಕ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಸಾರ್ಕ್ ಶೃಂಗಸಭೆ ಅಂತ್ಯವಾಗುತ್ತಿದ್ದಂತೆ, ಪಾಕ್ ಭಾರತೀಯ 35 ಮೀನುಗಾರರನ್ನು ನವೆಂಬರ್ ನಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿ, ಅದೇ ರೀತಿ ನವೆಂಬರ್ ನಲ್ಲಿ ಮೀನುಗಾರರನ್ನು ಬಿಡುಗಡೆ ಮಾಡಿತ್ತು. ಅತ್ತ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಮತ್ತೆ 50 ಭಾರತೀಯ ಮೀನುಗಾರರು ಪಾಕ್ ಜೈಲು ಸೇರಿದ್ದಾರೆ.

ಮೀನುಗಾರಿಕೆ ಕಾಯಿದೆ ಮತ್ತು ವಿದೇಶಿ ಕಾಯಿದೆಯಡಿ ಭಾರತೀಯ ಮೀನುಗಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪಾಕ್ ಪೊಲೀಸರು ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited