ನವದೆಹಲಿ : ಕಳೆದ 10 ವರ್ಷಗಳಿಂದ ಪೆಟ್ರೋಲ್ ದರ ಏರಿಕೆಯ ಸುದ್ದಿಯನ್ನೇ ನಿರಂತರವಾಗಿ ಕೇಳುತ್ತಿದ್ದ ಜನಸಾಮಾನ್ಯರಿಗೆ ಕಳೆದ 6 ತಿಂಗಳಿನಿಂದ ಪೆಟ್ರೋಲ್ ದರ ಇಳಿಕೆ ಸುದ್ದಿ ನಿರಂತರವಾಗಿ ಕೇಳುತ್ತಿದೆ. ಮತ್ತೊಮ್ಮೆ ಪೆಟ್ರೋಲ್ ದರ ಇಳಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಪ್ರತಿ ಲೀಟರ್ ಪೆಟ್ರೋಲ್, ಡಿಸೇಲ್ ದರವನ್ನು 2ರೂಪಾಯಿ ಇಳಿಕೆ ಮಾಡಲು ತೈಲ ಕಂಪನಿಗಳು ನಿರ್ಧರಿಸಿದ್ದು ಶೀಘ್ರವೇ ಪೆಟ್ರೋಲ್, ಡಿಸೇಲ್ ದರ ಇಳಿಕೆಯಾಗಲಿವೆ.
ಜಾಗತಿಕ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಕುಸಿದಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಲೆ ಇಳಿಕೆ ನಿರ್ಧಾರಕ್ಕೆ ಬಂದಿವೆ.
ಕೇಂದ್ರ ಸರ್ಕಾರ ಈ ತಿಂಗಳ ಆರಂಭದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ 1.50 ರುಪಾಯಿ ಏರಿಕೆ ಮಾಡಿತ್ತು. ಆದರೂ ತೈಲ ಕಂಪನಿಗಳು ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆ ಮಾಡಿರಲಿಲ್ಲ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70.45 ರುಪಾಯಿ ಇದ್ದು, ಡೀಸೆಲ್ ದರ 57.94 ರು ಇದೆ.