Untitled Document
Sign Up | Login    
Dynamic website and Portals
  
November 2, 2014

ಲವ್ ಜಿಹಾದ್ ಮೂಲಕ ಬಂಗಾಳದಲ್ಲಿ ಉಗ್ರ ಚಟುವಟಿಕೆ ವರ್ಧನೆ: ಸ್ಪೋಟಕ ಮಾಹಿತಿ

ಕೋಲ್ಕತ್ತಾ : 'ಪಶ್ಚಿಮ ಬಂಗಾಳ'ದ ಬುರ್ದ್ವಾನ್ ಸ್ಫೋಟದ ತನಿಖೆ ನಡೆಸುತ್ತಿರುವ ಎನ್.ಐ.ಎ ಲವ್ ಜಿಹಾದ್ ಮುಖವಾಡ ಕಳಚಿದ್ದು, ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ಮಾಲ್ಡ ಮತ್ತು ನಾಡಿಯಾ ಪ್ರದೇಶಗಳಲ್ಲಿ ಉಗ್ರರ ಸೇನೆ ಕಟ್ಟಲು 12 ಉಗ್ರ ಜೋಡಿಗಳು ಸನ್ನದ್ಧರಾಗಿದ್ದಾರೆ ಎಂಬ ಅಘಾತಕಾರಿ ಅಂಶ ಬಯಲು ಮಾಡಿದೆ.

ಈ ಬೆಳವಣಿಗೆಯಿಂದ ಇಲ್ಲಿನ ಉಗ್ರ ಸಂಘಟನೆಗಳ ಕಾರ್ಯಚಟುವಟಿಗೆಳು, ಸಿರಿಯಾ ಮತ್ತು ಇರಾಕ್ ನಲ್ಲಿ ಐ.ಎಸ್.ಐ.ಎಸ್ ಸಂಘಟನೆಗೆ ಸೇರಿಕೊಳ್ಳುತ್ತಿರುವ ಹೆಣ್ಣು ಜಿಹಾದಿಗಳ ಕಾರ್ಯರೂಪವನ್ನು ಹೋಲುತ್ತಿರುವುದು ಸ್ಪಷ್ಟವಾಗಿದ್ದು ಭದ್ರತಾ ಮತ್ತು ಗುಪ್ತಚರ ಪಡೆಗಳು ಆತಂಕಕ್ಕೀಡಾಗಿವೆ.

ಉಗ್ರ ಚಟುವಟಿಕೆಯಲ್ಲಿ ತೊಡಗಿರುವ ಹೆಂಗಸರು ಪಶ್ಚಿಮಬಂಗಾಳದ ಜಿಲ್ಲೆಗಳಾದ್ಯಂತ ಉಗ್ರ ಸಂಸ್ಥೆಗಳ ತರಬೇತಿಗೆ ಜನರನ್ನು ಹುಡುಕಿದ್ದಾರೆ ಮತ್ತು ತರಬೇತಿ ಶಿಬಿರಗಳನ್ನು ನಡೆಸಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಆದರೆ ಅವರೆಲ್ಲ ತಪ್ಪಿಸಿಕೊಂಡಿದ್ದಾರೆ ಎಂದು ಎನ್.ಐ.ಎ ಅಧಿಕಾರಿಗಳು ಸಂಶಯ ವ್ಯಕ್ತ ಪಡಿಸಿದ್ದಾರೆ.

ಬುರ್ದ್ವನ್ ಉಗ್ರ ಚಟುವಟಿಕೆಗಳ ನಾಯಕ ಸಾಜಿದ್ ಅವನ ಹೆಂಡತಿ ಫಾತಿಮಾ ಶಿಮುಲೈ ಮದರಸದಲ್ಲಿ ಮುಖ್ಯ ತರಬೇತುದಾರಳಾಗಿದ್ದು, ಅವಳ ತರಬೇತಿ ಪಠ್ಯವನ್ನು ಗಂಡ ಸಾಜಿದ್ ಸಿದ್ಧಪಡಿಸಿದ್ದ ಎಂದು ತಿಳಿದು ಬಂದಿದೆ. ಜಿಹಾದ್ ಮೂಲಕ ಇನ್ನೂ ಹೆಚ್ಚು ಹೆಣ್ಣುಮಕ್ಕಳನ್ನು ಉಗ್ರ ಚಟುವಟಿಕೆಗೆ ಸೇರಿಸಿಕೊಳ್ಳಲು ಈ ತಂಡದ ಉದ್ದೇಶವಾಗಿತ್ತು.

ಉಗ್ರ ಚಟುವಟಿಗೆ ಸೇರಿಸಿಕೊಂಡವರಿಗೆ ಸ್ಪೋಟಕಗಳ ಬಗ್ಗೆ ಮಾಹಿತಿ ನೀಡುವುದು, ಉಗ್ರವಾದದ ಸಿದ್ಧಾಂತಗಳನ್ನು ಅವರ ತಲೆಗೆ ತುಂಬುವುದು ಈ ರೀತಿಯ ಮುಂತಾದ ಚಟುವಟಿಕೆಗಳು ನಡೆದಿದ್ದು ತನಿಕೆಯಲ್ಲಿ ದಾಖಲಾಗಿವೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited