ಲಖ್ನೌ : ಹಿಂದೂಗಳು ಬಾಲಿವುಡ್ ಖಾನ್ ಗಳ ಸಿನಿಮಾಗಳನ್ನು ನೋಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿ ಹೇಳಿಕೆ ನೀಡಿದ್ದಾರೆ.
ಖಾನ್ ಗಳ ಸಿನಿಮಾಗಳು ಲವ್ ಜಿಹಾದ್ ಪ್ರೋತ್ಸಾಹಿಸುತ್ತದೆ. ಆದ್ದರಿಂದ ಖಾನ್ ಗಳ ಚಿತ್ರವನ್ನು ನಿಷೇಧಿಸಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಯಾರನ್ನು ಮದುವೆಯಾಗಬೇಕೆಂಬುದರ ಬಗ್ಗೆಯೂ ಸೂಚನೆ ನೀಡಿರುವ ಸಾಧ್ವಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭಾರತೀಯ ಹುಡುಗಿಯನ್ನೇ ಮದುವೆಯಾಗಬೇಕು ಎಂದು ಹೇಳಿದ್ದಾರೆ. ಸಾಧ್ವಿಯ ಹೇಳಿಕೆಯಿಂದ ಬಿಜೆಪಿಗೆ ಮತ್ತೊಮ್ಮೆ ಮುಜುಗರ ಉಂಟಾಗಿದೆ.
ಹಿಂದೂ ಮಹಿಳೆಯರು ನಾಲ್ಕು ಮಕ್ಕಳನ್ನು ಹೆರಬೇಕು. ಅವುಗಳಲ್ಲಿ ಒಂದನ್ನು ದೇಶದ ಗಡಿ ರಕ್ಷಣೆಗೆ, ಇನ್ನೊಂದನ್ನು ಸಮಾಜ ಸೇವೆ, ಮತ್ತೂಂದನ್ನು ಸನ್ಯಾಸತ್ವಕ್ಕೆ ಹಾಗೂ ಕೊನೆಯದನ್ನು ವಿಶ್ವ ಹಿಂದೂ ಪರಿಷತ್ ಸೇವೆಗೆ ಕೊಡಬೇಕು ಎಂದು ಈ ಹಿಂದೆಯೂ ಸಾಧ್ವಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ದೇಶಕ್ಕೆ ಈ ರೀತಿಯ ಅಗತ್ಯವಿರುವುದರಿಂದ ಹಿಂದೂ ಮಹಿಳೆಯರು ನಾಲ್ಕು ಮಕ್ಕಳನ್ನು ಹೆರಬೇಕೆಂಬ ತನ್ನ ಹೇಳಿಕೆಯನ್ನು ಆಕೆ ಸಮರ್ಥಿಸಿಕೊಂಡಿದ್ದರು.