ನವದೆಹಲಿ : ಮಾಹಿತಿ ತಂತ್ರಜ್ನಾನದ ದಿಗ್ಗಜ ಗೂಗಲ್ ಸಂಸ್ಥೆ ಇನ್ ಬಾಕ್ಸ್ ಎಂಬ ಹೊಸ ಇ-ಮೇಲ್ ಸೇವೆಯನ್ನು ಆರಂಭಿಸಿದೆ. ಇನ್ ಬಾಕ್ಸ್, ನಿಯೋಜಿತ ಕೆಲಸಗಳ ವಿವರಗಳ, ವಿಮಾನ ಪ್ರಾಯಾಣದ ವಿವರ ಬರಬೇಕಾದ ಪ್ಯಾಕೇಜ್ ಗಳ ವಿವರಗಳನ್ನು ವಿಶಿಷ್ಟವಾಗಿ ಪ್ರದರ್ಶಿಸುವ, ಬಳಕೆದಾರರಿಗೆ ಹೆಚ್ಚು ಉಪಯೋಗವುಳ್ಳ ಸೌಲಭ್ಯ ಹೊಂದಿದೆ.
ಹೊಸ ಸೇವೆಯನ್ನು ಬಳಸಲು ಗೂಗಲ್ ತನ್ನ ಬಳಕೆದಾರರಿಗೆ ಆಹ್ವಾನವನ್ನು ಕಳುಹಿಸಲಿದೆ. ಅಥವಾ ಜಿ-ಮೇಲ್ ಬಳಕೆದಾರರು inbox@google.com ಗೆ ಇ-ಮೇಲ್ ಕಳಿಸುವ ಮೂಲಕ ಈ ಸೇವೆಯ ಆಹ್ವಾನ ಪಡೆಯಬಹುದಾಗಿದೆ.
ಈ ಸೇವೆ ಆಂಡ್ರೈಡ್ ಸ್ಮಾರ್ಟ್ ಫೋನ್ ಮತ್ತು ಐ ಫೋನ್ ಗಳಿಗೂ ಲಭ್ಯವಾಗಿರುವುದು ವಿಶೇಷವಾಗಿದೆ. ಈ ಹೊಸ ಸೇವೆ ಜಿಮೇಲ್ ಗಿಂತ ಬಹಳ ವಿಭಿನ್ನ ಎನ್ನಲಾಗಿದೆ.
ಈ ಹೊಸ ಸೇವೆಯ ಘೋಷಣೆಯ ನಂತರ ನಾಸ್ದಾಕ್ ನಲ್ಲಿ ಗೊಗಲ್ ಸಂಸ್ಥೆಯ ಶೇರುಗಳು ಶೇ.1.7 ಮೇಲೇರಿವೆ.