ನವದೆಹಲಿ : ಕಪ್ಪುಹಣವಿಟ್ಟ ತನ್ನ ನಾಗರಿಕರ ಮಾಹಿತಿ ನೀಡುವಂತೆ ಭಾರತ ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದ ಮನವಿಗೆ ಸ್ವಿಜರ್ಲೆಂಡ್ ಸರ್ಕಾರ ಸಮ್ಮತಿ ಸೂಚಿಸಿದೆ.
ಭಾರತೀಯ ಬ್ಯಾಂಕಿಂಗ್ ಮಾಹಿತಿಯನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ ನೀಡುವುದಾಗಿ ಸ್ವಿಜರ್ಲೆಂಡ್ ಸರ್ಕಾರ ಘೋಷಿಸಿದೆ. ಇದು ಸ್ವಿಸ್ ಬ್ಯಾಂಕ್ ಗಳಲ್ಲಿ ಇರುವ ಕಪ್ಪುಹಣ ತನಿಖೆಯಲ್ಲಿ ಭಾರತಕ್ಕೆ ಸಿಕ್ಕ ಬಹುದೊಡ್ಡ ಗೆಲುವು ಎಂದೇ ಹೇಳಲಾಗುತ್ತಿದೆ.
ಈ ನಿಟ್ಟಿನಲ್ಲಿ ಭಾರತ ಕೋರುವ ಯಾವುದೇ ವ್ಯಕ್ತಿಯ ಬ್ಯಾಂಕ್ ಖಾತೆ ತನ್ನ ದೇಶದ ಬ್ಯಾಂಕ್ ಗಳಲ್ಲಿ ಇದೆಯೇ ಇಲ್ಲವೇ ಎಂಬುದನ್ನು ಸ್ವಿಸ್ ಬ್ಯಾಂಕ್ ಅಧಿಕಾರಿಗಳು ಖಚಿತಪಡಿಸಲಿದ್ದಾರೆ. ಬ್ಯಾಂಕೇತರ ಮಾಹಿತಿಯನ್ನೂ ಭಾರತಕ್ಕೆ ನೀಡಲಿದ್ದಾರೆ.
ಕೆಲವರ್ಷಗಳ ಹಿಂದೆ ಹೆಚ್.ಎಸ್.ಬಿ.ಸಿ ಬ್ಯಾಂಕ್ ನಲ್ಲಿ ಭಾರತೀಯರು ಕಪ್ಪುಹಣ ಇಟ್ಟಿರುವ ಮಾಹಿತಿ ಲಭ್ಯವಾಗಿತ್ತಾದರೂ ದೃಢಪಡಿಸಲು ಸ್ವಿಸ್ ಸರ್ಕಾರ ನಿರಾಕರಿಸಿದ್ದರಿಂದ ಮಾಹಿತಿ ಬಹಿರಂಗ ಅಸಾಧ್ಯ ಎಂದು ಹೇಳಿತ್ತು.