Untitled Document
Sign Up | Login    
Dynamic website and Portals
  
October 8, 2014

ಕಚಡಾ ಅಧಿಕಾರಿಗಳನ್ನು ಮನೆಗೆ ಕಳುಹಿಸುವೆ: ಮೇಯರ್ ಎಚ್ಚರಿಕೆ

BW News Bureau : ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಗರಂ ಆಗಿರುವ ಮೇಯರ್ ಶಾಂತಕುಮಾರಿ, ಕಚಡಾ ಅಧಿಕಾರಿಗಳನ್ನು ಮನೆಗೆ ಕಳುಹಿಸುವುದಾಗಿ ಗುಡುಗಿದ್ದಾರೆ.

ಭನ್ನೇರುಘಟ್ಟ ರಸ್ತೆಯಲ್ಲಿನ ರಾಜಕಾಲುವೆಗೆ ಗೀತಾಲಕ್ಷ್ಮಿ ಎಂಬ ಬಾಲಕಿ ಬಿದ್ದು ಎರಡು ದಿನಗಳಾದರೂ ಬಾಲಕಿ ಈ ವರೆಗೂ ಪತ್ತೆಯಾಗಿಲ್ಲ. ಪತ್ತೆಗಾಗಿ ನಡೆಸುತ್ತಿರುವ ಶೋಧಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ.

ಅ.7ರಂದು ಸಂಜೆ ನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದ ವೇಳೆ ಬಾಲಕಿ ಗೀತಾಲಕ್ಷ್ಮೀ ತನ್ನ ಅತ್ತೆಮನೆಗೆ ಬರುತ್ತಿದ್ದಾಗ ಭನ್ನೇರುಘಟ್ಟ ರಸ್ತೆಯಲ್ಲಿನ ರಾಜಕಾಲುವೆಗೆ ಜಾರಿ ಬಿದ್ದಿದ್ದಾಳೆ.

ಈ ನಡುವೆ ಘಟನಾಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಶಾಂತಕುಮಾರಿ, ಎರಡು ದಿನಗಳಿಂದ ಬಿಬಿಎಂಪಿ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಿದ್ದಾರೆ. ಬಿಬಿಎಂಪಿಯಲ್ಲಿ ಕೆಲವರು ಸಮರ್ಥ ಅಧಿಕಾರಿಗಳಿದ್ದಾರೆ. ಇನ್ನು ಕೆಲವರು ಸೋಮಾರಿಗಳಿದ್ದಾರೆ. ಮೊದಲು ಬಾಲಕಿ ಪತ್ತೆಯಾಗಬೇಕು. ಬಳಿಕ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಈ ಅಧಿಕಾರಿಗಳಿಂದ ನಮಗೇನೂ ಆಗಬೇಕಾಗಿಲ್ಲ, ಜನತೆಯ ಹಿತ ಮುಖ್ಯವಷ್ಟೇ. ಬಿಬಿಎಂಪಿಯಲ್ಲಿರುವ ಶೇ.10ರಷ್ಟು ಕಚಡಾ ಅಧಿಕಾರಿಗಳನ್ನು ಮನೆಗೆ ಕಳುಹಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆಯೂ ಮಾತನಾಡುತ್ತೇನೆ. ಬಿಬಿಎಂಪಿ ಆಯುಕ್ತರಿಗೂ ಆದೇಶ ನೀಡುತ್ತೇನೆ ಎಂದು ತರಾಟೆಗೆ ತೆಗೆದುಕೊಂಡರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited