Untitled Document
Sign Up | Login    
Dynamic website and Portals
  
October 7, 2014

ಜಯಲಲಿತಾ ಜಾಮೀನು ಅರ್ಜಿ ವಿಚಾರಣೆಗೆ ಕ್ಷಣಗಣನೆ

ಜಯಲಲಿತಾ ಜಯಲಲಿತಾ

ಬೆಂಗಳೂರು : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜಾಮೀನು ಅರ್ಜಿ ವಿಚಾರಣೆ ಕೆಲಸಮಯದಲ್ಲಿ ಹೈಕೋರ್ಟ್ ನಲ್ಲಿ ನಡೆಯಲಿದೆ. ಜಯಲಲಿತಾ ಅವರಿಗೆ ಜಾಮಿನು ಸುಗಬಹುದು ಎಂಬ ನಿರೀಕ್ಷೆಯಲ್ಲಿ ತಮಿಳುನಾಡಿನ ಹಲವು ಸಚಿವರು, ಶಾಸಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ.

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಜಯಲಲಿತಾ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ಅಮಾನತ್ತಿನಲ್ಲಿಟ್ಟು, ಜಾಮೀನು ಮಂಜೂರು ಮಾಡುವಂತೆ ಕೋರಿ ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ಮನವಿ ಸಲ್ಲಿಸಿದ್ದರು.

ಜಯಲಲಿತಾ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್ ರಜಾಕಾಲದ ಪೀಠದಲ್ಲಿ ಅ.1 ಹಾಗೂ 2ರಂದು ನಡೆಸಲಾಗಿತ್ತು, ಆದರೆ ಪ್ರಕರಣವನ್ನು ಸಾಮಾನ್ಯ ಪೀಠ ವಿಚಾರಣೆ ನಡೆಸುವುದು ಸೂಕ್ತ ಎಂದು ತೀರ್ಮಾನಿಸಿದ್ದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತ್ತು. ಅ.7ರಿಂದ ಹೈಕೋರ್ಟ್ ಸಾಮಾನ್ಯ ಪೀಠಗಳ ಕಲಾಪ ಆರಂಭವಾಗಲಿದ್ದು, ಜಯಲಲಿತಾ ಅರ್ಜಿ ವಿಚಾರಣೆ ನಡೆಯಲಿದೆ.

ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರಿರುವ ಪೀಠದ ಎದುರು ಮೇಲ್ಮನವಿ ವಿಚಾರಣೆಗೆ ಬರಲಿದ್ದು, ದಿನನಿತ್ಯದ ವಿಚಾರಣಾ ಪಟ್ಟಿಯಲ್ಲಿ 73ನೇ ಪ್ರಕರಣವಾಗಿದೆ. ಜಯಲಲಿತಾ ಪರ ಹಿರಿಯ ವಕೀಲ ರಾಮ್ ಜೇಠ್ಮಲಾನಿ, ತಮಿಳುನಾಡಿನ ವಿಚಕ್ಷಣ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಪರವಾಗಿ ಭವಾನಿ ಸಿಂಗ್ ವಾದ ಮಂಡಿಸಲಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited