ಲಖ್ನೌ : ಭಾರತೀಯ ಸೇನೆಗೆ ಸೇರಿದ ಹೆಲಿಕಾಫ್ಟರ್ ಪತನಗೊಂಡ ಪರಿಣಾಮ ಮೂವರು ಸೇನಾಧಿಕಾರಿಗಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ಅ.1ರ ಬೆಳಿಗ್ಗೆ ನಡೆದಿದೆ.
ಹೆಲಿಕಾಫ್ಟರ್ ಟೇಕ್ ಆಫ್ ಆದ ನಂತರ ಎಂಜಿನ್ ನಲ್ಲಿ ಸಮಸ್ಯೆ ಕಾಣಿಸಿಕೊಂಡು ಹೆಲಿಕಾಫ್ಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಸೇನಾ ಹೆಲಿಕಾಫ್ಟರ್ ಏರ್ ಬೇಸ್ ನಲ್ಲಿ ಅಪಘಾತಕ್ಕೀಡಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪತನಗೊಂಡ ಹೆಲಿಕಾಫ್ಟರ್ ಎಂದಿನಂತೆ ಕಾರ್ಯನಿರ್ವಹಣೆಯಲ್ಲಿತ್ತು ಎಂದು ತಿಳಿದುಬಂದಿದೆ.
ಹೆಲಿಕಾಫ್ಟರ್ ನಲ್ಲಿದ್ದ ಓರ್ವ ಪೈಲೆಟ್, ಇಬ್ಬರು ಇಂಜಿನಿಯರ್ ಗಳು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಸೇನಾಧಿಕಾರಿಗಳು ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.