ಅಹಮದಾಬಾದ್ : ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಹಮದಾಬಾದ್ ನ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
ಪತ್ನಿ ಹಾಗೂ ಸರ್ಕಾರದ ಇತರ ಅಧಿಕರಿಗಳೊಂದಿಗೆ ಆಗಮಿಸಿದ ಜಿನ್ ಪಿಂಗ್ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ವಿಮಾನ ನಿಲ್ದಾಣದಿಂದ ಖಾಸಗಿ ಹೋಟೆಲ್ ಗೆ ತರಳಲಿರುವ ಕ್ಸಿ ಜಿನ್ ಪಿಂಗ್ ಅವರನ್ನು ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲಿದ್ದಾರೆ.
ಸಂಜೆ ಸಬರಮತಿ ನದಿ ದಡದಲ್ಲಿ ಉಭಯ ನಾಯಕರಿಗೆ ಔತಣಕೂಟ ಆಯೋಜಿಸಲಾಗಿದೆ. ಕ್ಸಿ ಜಿನ್ ಪಿಂಗ್ ಭಾರತದ ಭೇಟಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಗೆ ಉತ್ತಮ ಸಹಕಾರ ನೀಡುವ ನಿರೀಕ್ಷೆಯಿದೆ.
ಬೆಂಗಳೂರು-ಮುಂಬೈ, ಬೆಂಗಳೂರು ಚೆನ್ನೈ ಹೈಸ್ಪೀಡ್ ರೈಲು ಸಂಚಾರ, ಭಾರತದ ರೈಲ್ವೆ ವಲಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ವಿಯಟ್ನಾಂ ಒಪ್ಪಂದ ಸೇರಿದಂತೆ ಹಲವು ಒಪ್ಪಂದಗಳಿಗೆ ಉಭಯ ದೇಶಗಳು ಸಹಿಹಾಕುವ ನಿರೀಕ್ಷೆಯಿದೆ.
ಇತ್ತೀಚಿನ ವರದಿ ಪ್ರಕಾರ ಗುಜರಾತ್ ಗೆ ಸಂಬಂಧಿಸಿದ ನೂರು ಬಿಲಿಯನ್ ಡಾಲರ್ ಮೊತ್ತದ ಮೂರು ಒಪ್ಪಂದಗಳಿಗೆ ಪ್ರಧಾನಿ ಮೋದಿ ಹಗೂ ಚೀನಾ ಅಧ್ಯಕ್ಷ ಜಿನ್ ಪಿಂಗ್ ಸಮ್ಮುಖದಲ್ಲಿ ಸಹಿಹಾಕಲಾಗಿದೆ. ಎರಡೂ ರಾಷ್ಜ್ಟ್ರಗಳ ಸಹಭಾಗಿತ್ವದಲ್ಲಿ ವಡೋದರಾ ಬಳಿ ಕೈಗಾರಿಕಾ ಪಾರ್ಕ್ ಸ್ಥಾಪನೆ, ಸಾಂಸ್ಕೃತಿಕ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ತಿಳಿದುಬಂದಿದೆ.