ಬೆಂಗಳೂರು : ನಿಗಮ ಮಂಡಳಿ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನಡುವೆ ನಡೆದ ಮಾತುಕತೆ ಮುಕ್ತಾಯವಾಗಿದ್ದು, ಒಮ್ಮತದ ನಿರ್ಧರಕ್ಕೆ ಬರುವಲ್ಲಿ ಸಭೆ ಬಹುತೇಕ ವಿಫಲವಾಗಿದೆ.
ಸುದೀರ್ಘವಾಗಿ ನಡೆಯಬೇಕಿದ್ದ ಸಭೆಯನ್ನು ಇಬ್ಬರು ನಾಯಕರು ಒಂದುಗಂಟೆಗೆ ಸೀಮಿತಗೊಳಿಸಿ ಮೊಟಕುಗೊಳಿಸಿದರು.
ನಿಗಮ ಮಂಡಳಿಗಳಿಗೆ ಮೊದಲ ಹಂತದಲ್ಲಿ 60 ಅಧ್ಯಕ್ಷರ ನೇಮಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮಿತಿ ಸೂಚಿಸಿದ್ದಾರೆ. ಪಕ್ಷದ ವತಿಯಿಂದ ಪಟ್ಟಿ ಕಳುಹಿಸಿಕೊಡಿ ಅದನ್ನು ಪರಿಶೀಲಿಸಿ ಯಾರನ್ನು ನೇಮಕ ಮಾಡಬೇಕು ಎಂದು ತೀರ್ಮಾನಿಸುತ್ತೇನೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯಿಂದ ಪರಮೇಶ್ವರ್ ಅಸಮಾಧಾನಗೊಂಡಿದ್ದಾರೆ. ನಿಗಮ ಮಂಡಳಿ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಸೂಚನೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿ.ಪರಮೇಶ್ವರ್ ಸಭೆ ನಡೆಸಿದ್ದಾರೆ ಆದರೆ ಒಮ್ಮತದ ನಿರ್ಧಾರ ಕೈಗೊಳ್ಳಲು ವಿಫಲವಾದ ಹಿನ್ನಲೆಯಲ್ಲಿ ಸಭೆ ಅಪೂರ್ಣಗೊಂಡಿದೆ.