Untitled Document
Sign Up | Login    
Dynamic website and Portals
  
September 14, 2014

ಸೆ.24ರಂದು ಪ್ರಧಾನಿ ಮೋದಿ ತುಮಕೂರಿಗೆ: ಫುಡ್ ಪಾರ್ಕ್ ಗೆ ಚಾಲನೆ

ನರೇಂದ್ರ ಮೋದಿ ನರೇಂದ್ರ ಮೋದಿ

ತುಮಕೂರು : ತುಮಕೂರಿನಲ್ಲಿ ಸೆ.24ರಂದು ಏಷ್ಯಾದ ಅತಿ ದೊಡ್ಡ ಫುಡ್ ಪಾರ್ಕ್ ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ತುಮಕೂರಿನ ರಾಷ್ಟ್ರೀಯ ಹೆದ್ದಾರಿ-4ರ ತುಮಕೂರು-ಶಿರಾ ರಸ್ತೆಯ ವಸಂತಪುರದಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಅತಿದೊಡ್ಡ ಫುಡ್ ಪಾರ್ಕ್ ನಿರ್ಮಾಣಗೊಳ್ಳುತ್ತಿದೆ. ಸೆ.23ರಂದು ಬೆಂಗಳೂರಿಗೆ ಅಗಮಿಸಲಿರುವ ಪ್ರಧಾನಿ ಮೋದಿ, ಸೆ. 24ರಂದು ತುಮಕೂರಿಗೆ ಆಗಮಿಸಲಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮಂಡಿಸಲಾದ ಮೊದಲ ಬಜೆಟ್ ನಲ್ಲಿ ತುಮಕೂರಿಗೆ ಭರ್ಜರಿ ಕೊಡುಗೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಫುಡ್ ಪಾರ್ಕ್ ನಿರ್ಮಾಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈ ಮೂಲಕ ತುಮಕೂರು ರಾಷ್ಟ್ರಮಟ್ಟದಲ್ಲಿ ಗಮನಸೆಳೆಯಲಿದೆ.

ಫುಡ್ ಪಾರ್ಕ್ ಗೆ ಚಾಲನೆ ಬಳಿಕ ಜಿಲ್ಲೆಯಲ್ಲಿ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ನಿರೀಕ್ಷೆಯಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited