ಇಸ್ಲಾಮಾಬಾದ್ : ಪಾಕ್ ಆಕ್ರಮಿತ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಸಹಾಯ ಮಾಡುತ್ತಿರುವುದಕ್ಕಾಗಿ ಪಾಕಿಸ್ತಾನ ಪ್ರಧಾನಿ, ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ವಿಪತ್ತು ನಿರ್ವಹಣೆಯಲ್ಲಿ ಶಾಂತಿ ಮತ್ತು ಅಭಿವೃದ್ಧಿ ಭಾರತ-ಪಾಕಿಸ್ತಾನದ ಕಾರ್ಯಸೂಚಿಯ ಭಾಗವಾಗಿರಬೇಕು ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ ಪಾಕ್ ಆಕ್ರಮಿತ ಪ್ರದೇಶದಲ್ಲಿ ಪ್ರವಾಹ ಉಂಟಾಗಿರುವುದಕ್ಕೆ ಮೋದಿ ಸರ್ಕಾರವೇ ಕಾರಣ ಎಂದು ಉಗ್ರ ಹಫೀಜ್ ಸಯೀದ್ ಆರೋಪಿಸಿದ್ದಾನೆ.
ಭಾರತ ಸರ್ಕಾರ ಯಾವುದೇ ಸೂಚನೆ ನೀಡದೇ ನದಿಗಳ ನೀರನ್ನು ಬಿಡುಗಡೆ ಮಾಡಿರುವುದರ ಪರಿಣಾಮ, ಪಾಕಿಸ್ತಾನದಲ್ಲಿ ಪ್ರವಾಹ ಉಂಟಾಗಿದೆ ಎಂದು ಹಫೀಜ್ ಸಯೀದ್ ಆರೋಪಿಸಿದ್ದ ಅಲ್ಲದೇ ಪ್ರಧಾನಿ ಮೋದಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನೆರವು ನೀಡುತ್ತಿರುವುದನ್ನು ಸರ್ಕಾರದ ಕಿಡಿಗೇಡಿತನ ಎಂದೂ ಹೇಳಿದ್ದಾನೆ.