ಸಿಡ್ನಿ : ಅತ್ಯಂತ ಕಡಿಮೆ ಖರ್ಚಿನಲ್ಲಿ ವಿಮಾನ ಯಾನ ಕೈಗೊಳ್ಳಬಹುದಾದ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಆಸ್ಟ್ರೇಲಿಯಾ ಪತ್ರಿಕೆಯೊಂದು ವರದಿ ಮಾಡಿದೆ.
ಪ್ರತಿ 100 ಕಿ.ಮಿ ಪ್ರಯಾಣಕ್ಕೆ ಭಾರತದಲ್ಲಿ ಕೇವಲ $10.36 ಖರ್ಚಾಗಲಿದೆ ಈ ಹಿನ್ನೆಲೆಯಲ್ಲಿ ಭಾರತ ಅತ್ಯಂತ ಕಡಿಮೆ ಖರ್ಚಿನಲ್ಲಿ ವಿಮಾನ ಯಾನ ಕೈಗೊಳ್ಳಬಹುದಾದ ದೇಶಗಳಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಭಾರತದ ನಂತರ ಮಲೇಷಿಯಾ, ದಕ್ಷಿಣ ಆಫ್ರಿಕಾ, ಎರಡು ಹಾಗೂ ಮೂರನೇ ಸ್ಥಾನ ಪಡೆದಿವೆ.
ಇನ್ನು ಪ್ರಪಂಚದಲ್ಲಿ ಅತ್ಯಂತ ದುಬಾರಿ ಖರ್ಚಿನಲ್ಲಿ ವಿಮಾನಯಾನ ಕೈಗೊಳ್ಳಬಹುದಾದ ದೇಶವನ್ನೂ ಉಲ್ಲೇಖಿಸಲಾಗಿದ್ದು ಫಿನ್ ಲ್ಯಾಂಡ್ ಗೆ ಪ್ರಥಮ ಸ್ಥಾನ ದೊರೆತಿದೆ. ಪ್ರತಿ 100ಕಿ.ಮಿ ಪ್ರಯಾಣಕ್ಕೆ ಫಿನ್ ಲ್ಯಾಂಡ್ ನಲ್ಲಿ $138.90 ವೆಚ್ಚವಾಗಲಿದೆ. ಎರಡನೇ ಅತ್ಯಂತ ದುಬಾರಿ ವೆಚ್ಚವಾಗಲಿರುವ ದೇಶದ ಸ್ಥಾನದಲ್ಲಿ ಸ್ವಿಟ್ಜರ್ ಲ್ಯಾಂಡ್, ಲಿತುಯಾನಿಯಾ, ಆಸ್ಟ್ರಿಯಾ, ಇಸ್ಟೋನಿಯಾ ಎಂದು ವರದಿ ಮಾಡಲಾಗಿದೆ.