Untitled Document
Sign Up | Login    
Dynamic website and Portals
  
August 31, 2014

ಮೋದಿ ಮೋಡಿಗೊಳಗಾದ ಜಪಾನ್ ಜನತೆ

ಜಪಾನ್ ಪ್ರಧಾನಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಭಾರತದ ಪ್ರಧಾನಿಗೆ ಆದರದ ಆತಿಥ್ಯ

ಪ್ರಧಾನಿ ಮೋದಿ ಅವರೊಂದಿಗೆ ಜಪಾನ್ ಪ್ರಧಾನಿ ಶಿಂಜೋ ಅಬೆ ಪ್ರಧಾನಿ ಮೋದಿ ಅವರೊಂದಿಗೆ ಜಪಾನ್ ಪ್ರಧಾನಿ ಶಿಂಜೋ ಅಬೆ

ಟೋಕಿಯೋ : ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸದಲ್ಲಿದ್ದು, ಜಪಾನ್ ಜನತೆ 'ಮೋದಿ ಮೋಡಿ'ಗೊಳಗಾಗಿದ್ದಾರೆ. ಪ್ರಧಾನಿ ಪ್ರವಾಸದ ವೇಳೆ ಜಪಾನ್ ನಾಗರಿಕರಿಂದಲೂ ಮೋದಿ ಜಪ(ಮೋದಿ ಪರ ಘೋಷಣೆ) ಕೇಳಿಬಂದಿದ್ದು ವಿಶೇಷವಾಗಿತ್ತು.

ಭಾರತದ ಪ್ರಧಾನಿ ಭೇಟಿಗೆ ಜಪಾನ್ ನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ಮೋದಿ ಗೆ ಸಾಥ್ ನೀಡಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಇದೇ ಪ್ರಥಮ ಬಾರಿಗೆ ವಿದೇಶದ ಪ್ರಧಾನಿಯನ್ನು ಅತ್ಯಾದರದಿಂದ ಬರಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಜಪಾನ್ ಭೇಟಿ ವಿಶ್ವದ ಕೇಂದ್ರಬಿಂದುವಾಗಿದೆ.

ಜಪಾನ್ ನ ಐತಿಹಾಸಿಕ, ಧಾರ್ಮಿಕ ಕ್ಷೇತ್ರಗಳಿಗೆ ಮೋದಿ ಜೊತೆಯಲ್ಲಿ ಶಿಂಜೋ ಅಬೆ ಕೂಡ ಭೇಟಿ ನೀಡುತ್ತಿರುವುದು ಶಿಂಜೋ ಅವರ ರಾಜಕೀಯ ಇತಿಹಾಸದಲ್ಲೇ ಪ್ರಥಮ ಬಾರಿಯಾಗಿರುವುದು ಮತ್ತೊಂದು ವಿಶೇಷವಾಗಿದೆ. ಶಿಂಜೋ ಅವರು ವಿದೇಶದ ಯಾವ ಪ್ರಧಾನಿಗೂ ಮೋದಿಗೆ ನೀಡಿದಷ್ಟು ಮಹತ್ವ ನೀಡಿರಲಿಲ್ಲ.

ಜಪಾನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರದ ದಿನಚರಿ ಹಲವು ಸ್ವಾರಸ್ಯಗಳಿಗೆ ಸಾಕ್ಷಿಯಾಯಿತು. ಜಪಾನ್ ನ ತೋಜಿ ದೇವಾಲಯಕ್ಕೆ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ಕಮಲ ಹಿಡಿದ ಬುದ್ಧನ ವಿಗ್ರಹ ಮೋದಿ ಅವರನ್ನು ಸ್ವಾಗತಿಸಿತು. ಈ ಸಂದರ್ಭದಲ್ಲಿ ಜೊತೆಗಿದ್ದ ಶಿಂಜೋ ಅಬೆ, ಕಮಲದ ಮಹತ್ವವನ್ನು ತಿಳಿಸಲು ಮುಂದಾದರು. ಆದರೆ ಮೋದಿ ತಮಗೆ ಕಮಲದ ಮಹತ್ವ ತಿಳಿದಿದೆ ಎಂದ ಮೋದಿ, 'ನನಗೆ ಕಮಲ ಹೂವಿನ ಮಹತ್ವ ತಿಳಿದಿದೆ ಏಕೆಂದರೆ ಅದು ನನ್ನ ಪಕ್ಷದ ಚಿಹ್ನೆ' ಎಂದು ಹಾಸ್ಯ ಚಟಾಕಿ ಹಾರಿಸಿ ಪ್ರಧಾನಿ, ಜಪಾನ್ ಪ್ರಧಾನಿ ನಗೆಗಡಲಲ್ಲಿ ತೇಲಿದರು.

 

ಮೋದಿ ಮೋಡಿಗೊಳಗಾದ ಜಪಾನ್ ಜನತೆ ಬೌದ್ಧ ಸನ್ಯಾಸಿಯೊಂದಿಗೆ ಮೋದಿ ಮಾತುಕತೆ....
ಕ್ಯೋಟೋ ದೇವಾಲಯಕ್ಕೆ ಮೋದಿ ಭೇಟಿ, ಸಂತಸ ವ್ಯಕ್ತಪಡಿಸಿದ ಶಿಂಜೋ ಅಬೆ:

ದೇಗುಲ ನಗರಿ ಕ್ಯೋಟೋ ನಲ್ಲಿರುವ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಅಲ್ಲಿನ ಸಾಂಸ್ಕೃತಿಕ ಪರಂಪರೆಯನ್ನು ಆನಂದಿಸಿದರು ಎಂದು ಶಿಂಜೋ ಅಬೆ ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಬುದ್ಧನ ವಿಗ್ರಹಗಳನ್ನು ವೀಕ್ಷಿಸುತ್ತಾ ತಾವು ಹಾಗೂ ನರೇಂದ್ರ ಮೋದಿ, ಜಪಾನ್ ಮತ್ತು ಭಾರತದ ನಡುವಿನ ಐತಿಹಾಸಿಕ ಸಂಬಂಧಗಳನ್ನು ನೆನಪಿಸಿಕೊಂಡೆವು ಎಂದು ಅಬೆ ಟ್ವೀಟ್ ಮಾಡಿದ್ದಾರೆ.

ನಾನು ಮೋದಿ, ನೀವು ಮೊರಿ: ಬೌದ್ಧ ಸನ್ಯಾಸಿಯನ್ನು ಅಭಿನಂದಿಸಿದ ಮೋದಿ!:

ನಾನು ಮೋದಿ, ನೀವು ಮೊರಿ! ಬೌದ್ಧ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೂ ಮುನ್ನ ನರೇಂದ್ರ ಮೋದಿ ಬೌದ್ಧ ಸನ್ಯಾಸಿಯನ್ನು ಅಭಿನಂದಿಸಿದ್ದು ಹೀಗೆ! ಕ್ಯೋಟೋದ ಪ್ರಸಿದ್ಧ ಬೌದ್ಧ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನರೇಂದ್ರ ಮೋದಿ, ಅಲ್ಲಿನ 83 ವರ್ಷದ ಬೌದ್ಧ ಸನ್ಯಾಸಿಯೊಂದಿಗೆ ಕಲೆವು ಕ್ಷಣ ಮಾತುಕತೆ ನಡೆಸಿದ್ದಾರೆ.

ಜಪಾನ್ ಮೇಯರ್ ನ್ನು ಭೇಟಿ ಮಾಡಿದ ಪ್ರಧಾನಿ: ಭಾನುವಾರ, ಪ್ರಧಾನಿ ನರೇಂದ್ರ ಮೋದಿ, ಕ್ಯೋಟೋದ ಮೇಯರ್ ಅವರನ್ನು ಭೇಟಿ ಮಾಡಿದ್ದಾರೆ. ಜಪಾನ್ ನ ದೇಗುಲ ನಗರಿ ಕ್ಯೋಟೋ ಅಭಿವೃದ್ಧಿ ಪಡಿಸಿರುವ ಬಗ್ಗೆ ಸುದೀರ್ಘ ಮಾತುಕತೆ ನಡೆಸಿ ಹಲವು ವಿಷಯಗಳ ಬಗ್ಗೆ ಮೇಯರ್ ರಿಂದ ಮಾಹಿತಿ ಪಡೆದಿದ್ದಾರೆ.

ಕ್ಯೋಟೋ ನ್ನು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಸ್ಮಾರ್ಟ್ ಸಿಟಿಯನ್ನಾಗಿ ನಿರ್ಮಿಸಿರುವ ಬಗ್ಗೆ ಮೇಯರ್ ರಿಂದ ಮಾಹಿತಿ ಪಡೆದಿರುವ ಮೋದಿ, ಕ್ಯೋಟೋದ ಅನುಭವವನ್ನು ಬಳಸಿಕೊಂಡು ಭಾರತದ ಪುಣ್ಯ ಕ್ಷೇತ್ರವಾಗಿರುವ ವಾರಾಣಸಿಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದಾರೆ. ಇದಕ್ಕಾಗಿ ಈಗಾಗಲೇ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ.

ಸೆ.1ರಂದು ಪ್ರಧಾನಿ ಮೋದಿ, ಶಿಂಜೋ ಅಬೆಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಕಾರ್ಯಕ್ರಮ ನಿಗದಿಯಾಗಿದೆ. ರಕ್ಷಣೆ, ನಾಗರಿಕ ಅಣು ವಲಯ, ವಿರಳ ಲೋಹ ಘಟಕಗಳನ್ನು ಜಂಟಿಯಾಗಿ ಆರಂಭಿಸುವ ಸಂಬಂಧ ಉಭಯ ದೇಶಗಳು ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆಯಿದೆ. ಜಪಾನ್-ಭಾರತದ ನಡುವಿನ ದ್ವಿಪಕ್ಷೀಯ ಮಾತುಕತೆ ವಿಶ್ವದ ಕೇಂದ್ರಬಿಂದುವಾಗಿದೆ.

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited