Bengaluru : ಜಾಗತಿಕ ಸಮುದಾಯವನ್ನು ಎದುರು ಹಾಕಿಕೊಂಡು ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತಿರುವ ಉತ್ತರ ಕೊರಿಯಾ
ವಿರುದ್ಧ ಅಮೆರಿಕ ಕಿಡಿಕಾರಿದೆ.
ಉತ್ತರ ಕೊರಿಯಾದ ಈ ಉದ್ಧಟತನದ ಹಿನ್ನೆಲೆಯಲ್ಲಿ ಅಮೆರಿಕ ಆರ್ಥಿಕ ನಿರ್ಬಂಧ ಹೇರಲುಮುಂದಾಗಿದೆ. ಉತ್ತರ ಕೊರಿಯಾದ ಎಂಟು ಬ್ಯಾಂಕ್‍ಗಳು ಹಾಗೂ 26 ಉನ್ನತಾಧಿಕಾರಿಗಳ ವಿರುದ್ಧ ಆರ್ಥಿಕ ನಿರ್ಬಂಧ ಹೇರಲಾಗಿದೆ.
ವಾಷಿಂಗ್ಟನ್‍ನಲ್ಲಿ ಈ ವಿಷಯವನ್ನು ವಿದೇಶಾಂಗ ವ್ಯವಹಾರ ಸಚಿವಾಲಯ ದ ಸ್ಟೀವನ್ ಮ್ಯುಚಿನ್ ತಿಳಿಸಿದ್ದಾರೆ.
ಉತ್ತರ ಕೊರಿಯಾದ ಬ್ಯಾಂಕ್‍ಗಳು ಹಾಗೂ ಅದರ ಉನ್ನತಾಧಿಕಾರಿಗಳು ಅಮೆರಿಕದಲ್ಲಿ ಹೊಂದಿರುವ ಆಸ್ತಿ ಹಾಗೂ ಇತರೆ ವ್ಯವಹಾರಗಳ ಮೇಲೆ ಆರ್ಥಿಕ ನಿರ್ಬಂಧ ಹೇರಲಾಗಿದೆ ಎಂದು ಅವರು ತಿಳಿಸಿದ್ದಾರೆ.