ನವದೆಹಲಿ : ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿ, ಮಾದಕದ್ರವ್ಯ ಕಳ್ಳಸಾಗಣೆ ಮಾಡಲು ಯತ್ನಿಸಿದ್ದ ಇಬ್ಬರು ವ್ಯಕ್ತಿಗಳನ್ನು ಬಿಎಸ್ ಎಫ್ ಯೋಧರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಪಾಕಿಸ್ತಾನ ದಿಂದ ಪಂಜಾಬ್ ನ ಫಾಕಿಜಾ ಗಡಿಯಲ್ಲಿ ಬೆಳಗಿನ ಜಾವ ಭಾರತಕ್ಕೆ ನುಸುಳತ್ನೆಸಿದ ಮೂರು ಸ್ಮಗ್ಲರ್ ಗಳ ಪೈಕಿ ಇಬ್ಬರನ್ನು ಬಿಎಸ್ಎಫ್ ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮತ್ತೋರ್ವನಿಗೆ ಗಾಯವಾಗಿದೆ.
ಮೃತ ಸ್ಮಗ್ಲರ್ಗಳ ಬಳಿಯಿಂದ 15 ಪೊಟ್ಟಣ ಹೆರಾಯಿನ್ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ ಗಡಿ ಭಾಗದಲ್ಲಿ ಮಾದಕದ್ರವ್ಯ ಕಳ್ಳಸಾಗಣೆ ವ್ಯಾಪಕವಾಗಿ ಆರಂಭವಾಗಿದ್ದು, ಗಡಿ ಭದ್ರತಾ ಯೋಧರು, ಅವುಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದಾರೆ.